ಚಾಮರಾಜನಗರ : ಕೊರೊನಾ ಲಾಕ್‌ಡೌನ್ ಪರಿಣಾಮ ಬೆಳೆದಿದ್ದ ನೂರಾರು ಕೆಜಿ ಟೊಮ್ಯಾಟೊವನ್ನು ರೈತನೊಬ್ಬ ಜನರಿಗೆ ಉಚಿತವಾಗಿ ಹಂಚಿರುವ ಘಟನೆ ತಾಲೂಕಿನ ದೇಮಹಳ್ಳಿಯಲ್ಲಿ ನಡೆದಿದೆ.
ರಘು ಎಂಬಾತ ಬೆಳೆದಿದ್ದ ಟೊಮ್ಯಾಟೊವನ್ನು ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗದೇ ಅಂದಾಜು 1050 ಕೆಜಿ ಟೊಮ್ಯಾಟೊವನ್ನು 500ಕ್ಕೂ ಹೆಚ್ಚು ಮನೆ ಬಾಗಿಲಿಗೆ ತೆರಳಿ ಉಚಿತವಾಗಿ ವಿತರಿಸಿ ಹಲವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ತರಕಾರಿ ಬೆಲೆ ಗಗನಕ್ಕೇರಿರುವ ವೇಳೆಯಲ್ಲಿ ಸುಮಾರು 18 ಸಾವಿರ ರೂ. ಬೆಲೆ ಬಾಳುವ ಟೊಮ್ಯಾಟೊವನ್ನು ಉಚಿತವಾಗಿ ನೀಡಿದ್ದು ಲಾಕ್‌ಡೌನ್ ಸಮಯದಲ್ಲಿ ತನ್ನೂರಿನ ಜನರಿಗೆ ನೆರವಾಗಿದ್ದಾರೆ.