ETV Bharat / state

ಚಾಮರಾಜನಗರ: ಲಾರಿ ಚಾಲಕನಿಗೆ ಬೆದರಿಕೆ ಹಾಕಿದ್ದ ಫಾರೆಸ್ಟ್​ ಗಾರ್ಡ್​ ಅಮಾನತು - ಫಾರೆಸ್ಟ್​ ಗಾರ್ಡ್ ಬೆದರಿಕೆ ಸುದ್ದಿ

ಗನ್ ಕೊಡು, ಇವನನ್ನು ಸುಟ್ಟಾಕುತ್ತೇನೆ ಎಂದು ಲಾರಿ ಚಾಲಕನಿಗೆ ಫಾರೆಸ್ಟ್ ಗಾರ್ಡ್ ಆವಾಜ್ ಹಾಕಿರುವ ಘಟನೆ ಪಾಲಾರ್ ಗಡಿಯಲ್ಲಿನ ಅರಣ್ಯ ಚೆಕ್ ಪೋಸ್ಟ್​​ನಲ್ಲಿ ಆ.1 ರಂದು ನಡೆದಿತ್ತು.

Forest Guard threat
ಲಾರಿ ಚಾಲಕನಿಗೆ ಬೆದರಿಕೆ ಹಾಕಿದ್ದ ಫಾರೆಸ್ಟ್​ ಗಾರ್ಡ್​ ಅಮಾನತು
author img

By

Published : Aug 17, 2022, 3:35 PM IST

ಚಾಮರಾಜನಗರ: ಕುಡಿದ ಮತ್ತಿನಲ್ಲಿ ಹಣ ಕೊಡುವಂತೆ ಲಾರಿ ಚಾಲಕನಿಗೆ ಧಮ್ಕಿ ಹಾಕಿದ್ದ ಅರಣ್ಯ ಇಲಾಖೆ ನೌಕರನನ್ನು ಅಮಾನತು ಮಾಡಿ ಡಿಸಿಎಫ್ ಆದೇಶಿಸಿದ್ದಾರೆ. ಫಾರೆಸ್ಟ್ ಗಾರ್ಡ್ ಮೋಹನ್ ಕುಮಾರ್ ಅಮಾನತುಗೊಂಡ ನೌಕರ.

ಕಳೆದ ಆ.1 ರಂದು ಕರ್ನಾಟಕ ತಮಿಳುನಾಡು ಗಡಿಯ ಪಾಲಾರ್ ಚೆಕ್ ಪೋಸ್ಟ್​​ಗೆ ಮೋಹನ್ ಕುಮಾರ್​​ನನ್ನು ನಿಯೋಜಿಸಲಾಗಿತ್ತು. ಈ ವೇಳೆ, ಮದ್ಯದ ಮತ್ತಿನಲ್ಲಿ ಲಾರಿ ಚಾಲಕನಿಗೆ ಹಣ ಕೊಡುವಂತೆ ಧಮ್ಕಿ ಹಾಕಿದ್ದಲ್ಲದೇ ಬಂದೂಕಿನಿಂದ ಸುಟ್ಟು ಹಾಕುತ್ತೇನೆಂದು ಬೆದರಿಕೆ ಒಡ್ಡಿದ್ದಾರೆ ಎನ್ನಲಾಗ್ತಿದೆ.

ಲಾರಿ ಚಾಲಕನಿಗೆ ಬೆದರಿಕೆ ಹಾಕಿದ್ದ ಫಾರೆಸ್ಟ್​ ಗಾರ್ಡ್​ ಅಮಾನತು

ಅಧಿಕಾರಿಯ ಬೆದರಿಕೆ ಮಾತುಗಳನ್ನು ಚಾಲಕ ವಿಡಿಯೋ ಮಾಡಿದ್ದರು. ಇದು ವೈರಲ್ ಆಗಿತ್ತು. ಕೂಡಲೇ ಎಚ್ಚೆತ್ತ ಡಿಸಿಎಫ್, ಮೋಹನ್​​ನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಮದ್ಯ ಸೇವಿಸಿದ್ದು, ದೃಢಪಟ್ಟಿದ್ದರಿಂದ ಅಮಾನತು ಮಾಡಿ ತನಿಖೆಗೆ ಆದೇಶಿಸಿದ್ದಾರೆ.

ಇದನ್ನೂ ಓದಿ: ಗನ್​ನಲ್ಲಿ ಸುಡುತ್ತೇನೆಂದು ಲಾರಿ ಚಾಲಕನಿಗೆ ಫಾರೆಸ್ಟ್ ಗಾರ್ಡ್ ಆವಾಜ್: ವಿಡಿಯೋ ವೈರಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.