ಗುಂಡ್ಲುಪೇಟೆ: ತಾಲೂಕಿನ ಗುಂಡ್ಲುಪೇಟೆ ಬಫರ್ ಝೋನ್ ಅರಣ್ಯ ವಲಯ ವ್ಯಾಪ್ತಿಯ ಬರಗಿ ಕಾಲೊನಿಯ ಮನೆಯೊಂದರಲ್ಲಿ ಅವಿತು ಕುಳಿತಿದ್ದ ಚಿರತೆಯನ್ನ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.
ಮಹಾದೇವ ಎಂಬುವವರ ಮನೆಯಲ್ಲಿ ಸುಮಾರು ಒಂದೂವರೆ ವರ್ಷದ ಚಿರತೆ ಅಡಗಿ ಕುಳಿತಿತ್ತು. ಮಧ್ಯರಾತ್ರಿ 3 ಗಂಟೆ ಸಮಯದಲ್ಲಿ ಮನೆಗೆ ಬಂದಿದ್ದ ಚಿರತೆ ಕುರಿತು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
ಬೆಳಗ್ಗೆ 6ಗಂಟೆಯಲ್ಲಿ ಚಿರತೆಯನ್ನು ಸೆರೆ ಹಿಡಿದು, ಮೂಲೆಹೊಳೆ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು. ಎಸಿಎಫ್ ಪರಮೇಶ್, ಆರ್ ಎಫ್ ಲೋಕೇಶ್, ವೈದ್ಯ ನಾಗರಾಜು, ಸಿಬ್ಬಂದಿ ದೇವರಾಜು ಕಾರ್ಯಾಚರಣೆ ವೇಳೆ ಇದ್ದರು.