ಚಾಮರಾಜನಗರ : ಕಳೆದ ಆರು ತಿಂಗಳಲ್ಲಿ ಅರಣ್ಯ ಇಲಾಖೆ ಬರೋಬ್ಬರಿ 8 ಚಿರತೆಗಳನ್ನು ಸೆರೆ ಹಿಡಿದಿದೆ. ಇದರಿಂದ ಕಳೆದ 3 ತಿಂಗಳಿಂದ ತಾಲೂಕಿನಲ್ಲಿ ಚಿರತೆ ದಾಳಿಗೆ ಜಾನುವಾರು ಸಾವುಗಳಾಗಲಿ, ಗಾಯಗೊಂಡಿರುವುದಾಗಲಿ ವರದಿಯಾಗಿಲ್ಲ.
ಇಂದು ವೀರನಪುರದಲ್ಲಿ ಸೆರೆಯಾದ ಹೆಣ್ಣು ಚಿರತೆಯನ್ನೂಳಗೊಂಡಂತೆ ಕಳೆದ 6 ತಿಂಗಳುಗಳಲ್ಲಿ 8 ಚಿರತೆಗಳನ್ನ ಅರಣ್ಯ ಇಲಾಖೆ ಸೆರೆ ಹಿಡಿದಿದೆ. ಇದರಿಂದ ನಿಟ್ಟುಸಿರು ಬಿಟ್ಟಿರುವ ರೈತರು ನಿರಾತಂಕದಿಂದ ಜಮೀನುಗಳಿಗೆ ತೆರಳುತ್ತಿದ್ದಾರೆ.
ಜನವರಿ ಆರಂಭದ ಕೇವಲ 7 ದಿನದಲ್ಲಿ ಮೂರು ಚಿರತೆಗಳು ಸೆರೆಯಾಗಿದ್ದವು. ಇದುವರೆಗೆ ಸೆರೆಯಾಗಿರುವ ಎಲ್ಲಾ ಚಿರತೆಗಳ ಮೈಮೇಲೆ ಗಾಯಗಳಿಲ್ಲದೆ ಇದ್ದಿದ್ದರಿಂದ ಎಲ್ಲವನ್ನೂ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ ಕೋರ್ ಏರಿಯಾಗಳಿಗೆ ಬಿಡಲಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿಂದು 32,793 ಕೊರೊನಾ ಕೇಸ್ ಪತ್ತೆ: ಪಾಸಿಟಿವಿಟಿ ದರ 15%ಕ್ಕೆ ಏರಿಕೆ