ಚಾಮರಾಜನಗರ: ಹಲ್ಲಿ ಬಿದ್ದಿದ್ದ ಬಿಸಿಯೂಟ ಸೇವಿಸಿ 100ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿರುವ ಘಟನೆ ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ನಡೆದಿದೆ. ಕೆಸ್ತೂರಿನ ಹಿರಿಯ ಪ್ರಾಥಮಿಕ ಶಾಲೆ -1 ರಲ್ಲಿ ಈ ಘಟನೆ ನಡೆದಿದ್ದು, ಈ ಹಿಂದೆ ಇದೇ ಗ್ರಾಮದ ಮತ್ತೊಂದು ಪ್ರಾಥಮಿಕ ಶಾಲೆಯಲ್ಲಿ ಇದೇ ರೀತಿ ಹಲ್ಲಿ ಬಿದ್ದಿದ್ದ ಬಿಸಿಯೂಟದ ಸೇವಿಸಿ ಮಕ್ಕಳು ಅಸ್ವಸ್ಥರಾಗಿದ್ದರು.
ಮಧ್ಯಾಹ್ನದ ಊಟ ಸೇವಿಸಿದ್ದ ಮಕ್ಕಳಲ್ಲಿ ದಿಢೀರನೇ ವಾಂತಿ - ಭೇದಿ ಶುರುವಾಗಿದ್ದು ತಕ್ಷಣ ಎಚ್ಚೆತ್ತ ಶಿಕ್ಷಕ ವರ್ಗ ಆ್ಯಂಬುಲೆನ್ಸ್ ಮೂಲಕ ಯಳಂದೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ, 35 ಮಕ್ಕಳಿಗೆ ಡ್ರಿಪ್ ಹಾಕಲಾಗಿದ್ದು ಇನ್ನೆಲ್ಲಾ ಮಕ್ಕಳ ಮೇಲೆ ನಿಗಾ ಇಡಲಾಗಿದೆ. ಪದೇ ಪದೆ ಘಟನೆ ಮರುಕಳಿಸಿದ್ದಕ್ಕೆ ರೊಚ್ಚಿಗೆದ್ದ ಗ್ರಾಮಸ್ಥರು ಆಸ್ಪತ್ರೆ ಮುಂಭಾಗ ರಸ್ತೆ ತಡೆದು ಪ್ರತಿಭಟಿಸಿ ಆಕ್ರೋಶ ಹೊರಹಾಕಿದ್ದಾರೆ. ಸ್ಥಳಕ್ಕೆ ಎಸಿ, ತಹಶಿಲ್ದಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇದನ್ನೂ ಓದಿ : ಕಳ್ಳಭಟ್ಟಿ ದುರಂತದಲ್ಲಿ ತಂದೆ ಕಳೆದುಕೊಂಡ ನಾಲ್ವರು ಮಕ್ಕಳು: ಶಿಕ್ಷಣದ ಹೊಣೆ ಹೊತ್ತ ಪೊಲೀಸರು