ETV Bharat / state

ಶೋಕಿಗಾಗಿ ಕಳ್ಳತನ: ಒಂದೇ ರಾತ್ರಿ 5 ಮನೆಗೆ ಕನ್ನ ಹಾಕಿದ್ದವರು ಪೊಲೀಸ್ ಬಲೆಗೆ! - Kollegala Police

ಜುಲೈ 23ರ ರಾತ್ರಿ 5 ಮನೆಯಲ್ಲಿ ಕಳ್ಳತನ ಮಾಡಿ ಕೊಳ್ಳೇಗಾಲವನ್ನೇ ಬೆಚ್ಚಿಬೀಳಿಸಿದ್ದ ಖತರ್ನಾಕ್ ಖದೀಮರನ್ನು ಬಂಧಿಸುವಲ್ಲಿ ಕೊಳ್ಳೇಗಾಲ ಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ

ಕೊಳ್ಳೇಗಾಲದಲ್ಲಿ ಕಳ್ಳತನ ಮಾಡುತ್ತಿದ್ದ ಐವರನ್ನು ಬಂಧಿಸಿದ ಪೊಲೀಸರು

author img

By

Published : Aug 6, 2020, 4:51 PM IST

ಕೊಳ್ಳೇಗಾಲ: ಪಟ್ಟಣದ ವಿವಿಧೆಡೆ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಖದೀಮರನ್ನು ಕೊಳ್ಳೇಗಾಲ ಪೊಲೀಸರು ಹೆಡೆಮುರಿಕಟ್ಟಿದ್ದಾರೆ.

ಮಂಜುನಾಥ ಬಡವಾಣೆ ನಿವಾಸಿ ಶಿವು (29), ಆಲ್ಕೆರೆ ಅಗ್ರಹಾರ ಗ್ರಾಮದ ನಿಂಗರಾಜು(29), ರಂಗಸ್ವಾಮಿ(23), ಕುಮಾರ್(31), ಮದ್ದೂರಿನ ಟೌನ್ ನಂದಿಶ್(26) ಬಂಧಿತ ಆರೋಪಿಗಳು. ಈ ಪ್ರಕರಣದ ಕಾರ್ಯಾಚರಣೆಯಲ್ಲಿ ಮೊದಲು ಸಿಕ್ಕಿಬಿದ್ದ ಮದ್ದೂರು ಪಟ್ಟಣದ ಮಧು ಅಲಿಯಾಸ್ ಯಾಟೆ ಜೈಲು ವಾಸದಲ್ಲಿದ್ದಾನೆ.
ಕೊಳ್ಳೇಗಾಲದಲ್ಲಿ ಕಳ್ಳತನ ಮಾಡುತ್ತಿದ್ದ ಐವರನ್ನು ಬಂಧಿಸಿದ ಪೊಲೀಸರು

ಜುಲೈ 23ರಂದು ಸರಣಿ ಕಳ್ಳತನ ಮಾಡಿ ಕೊಳ್ಳೇಗಾಲವನ್ನೇ ಬೆಚ್ವಿಬೀಳಿಸಿದ್ದ ಈ ಐನಾತಿ ಕಳ್ಳರು ಇದೀಗ ಪೋಲಿಸರ ಅತಿಥಿಯಾಗಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಮಾರ್ಗದರ್ಶನದಂತೆ ಸಿಪಿಐ ಶ್ರೀಕಾಂತ್ ಹಾಗೂ ಸಬ್​ ಇನ್ಸ್​ಪೆಕ್ಟರ್ ರಾಜೇಂದ್ರ ನೇತೃತ್ವದ ತಂಡ ಈ ಪ್ರಕರಣ ಭೇದಿಸಿದ್ದು, ಕೊಳ್ಳೇಗಾಲದ ಜನರಲ್ಲಿ ಸ್ವಲ್ಪಮಟ್ಟಿಗೆ ಆತಂಕ ದೂರಮಾಡಿದೆ.

ಈ‌ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್, ಸರಣಿ ಕಳ್ಳತನ ಮಾಡಿ ಆತಂಕ ಸೃಷ್ಟಿಸಿದ್ದ ಖದೀಮರನ್ನು ಬಂಧಿಸುವಲ್ಲಿ ನಮ್ಮ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಒಟ್ಟು 10.56 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರು ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಕಳ್ಳತನಕ್ಕೆ ಮುಂದಾಗುತ್ತಿದ್ದರು. ಒಟ್ಟಾರೆ ತಮ್ಮ ಶೋಕಿಗಾಗಿ ಕಳ್ಳತನ ಆಯ್ಕೆ ಮಾಡಿಕೊಂಡಿರುವ ಇವರು ಕುಡಿತ, ಮೋಜು ಮಸ್ತಿಗೆ ಕದ್ದ ಹಣವನ್ನು ವ್ಯಯ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಇಂತಹ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ ಗಸ್ತು ಕಾರ್ಯಾಚರಣೆ ವ್ಯವಸ್ಥಿತವಾಗಿದೆ. ಆದರೂ ಈ ರೀತಿ ಪ್ರಕರಣಗಳು ಪಟ್ಟಣದಲ್ಲಿ ನಡೆಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ರಾತ್ರಿ ಪಾಳಿಯವನ್ನು ಇನ್ನಷ್ಟೂ ಕಠಿಣಗೊಳಿಸಲಾಗುತ್ತದೆ. ಜನರು ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ. ಒಂದು ವೇಳೆ ಮನೆ ಬಿಟ್ಟು ಹೊರಗೆ ಹೋಗುವವರು ಪೊಲೀಸರಿಗೆ ಮಾಹಿತಿ ನೀಡಬೇಕು. ಮನೆಗಳಿಗೆ ಸಿಸಿಟಿವಿ ಅಳವಡಿಕೆ ಮಾಡಿದರೆ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬಹುದು ಎಂದರು.

ಇನ್ನು ಪಟ್ಟಣದ ವಿವಿಧ ಮನೆಗಳಲ್ಲಿ ಕಳ್ಳತನ ಮಾಡಿದ್ದ 8.20 ಲಕ್ಷ ಮೌಲ್ಯದ ಚಿನ್ನಾಭರಣ, 3 ಬೈಕ್, 1 ಕಾರು ಸೇರಿದಂತೆ 8 ಸಾವಿರ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಶೋಕಿಗಾಗಿ ಕಳ್ಳತನ: ಒಂದೇ ರಾತ್ರಿ 5 ಮನೆಗೆ ಕನ್ನ ಹಾಕಿದ್ದವರು ಪೊಲೀಸ್ ಬಲೆಗೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.