ಚಾಮರಾಜನಗರ: ಒಂಟಿಯಾಗಿ ನಡೆದುಹೋಗುವ ಹಾಗೂ ಬೈಕ್ ನಲ್ಲಿ ಹೋಗುವವರ ಮೇಲೆ ಹಲ್ಲೆ ನಡೆಸಿ ಹಣ, ನಗದು ದೋಚಲು ಹೊಂಚುಹಾಕಿದ್ದ ಐವರು ಬಿಹಾರಿಗಳನ್ನು ಬಂಧಿಸಿರುವ ಘಟನೆ ಯಳಂದೂರು ತಾಲೂಕಿನ ಮೆಲ್ಲಹಳ್ಳಿ ಗೇಟ್ ಬಳಿ ನಡೆದಿದೆ.
ಬಿಹಾರ ರಾಜ್ಯದ ದಿಲೀಪ್ ಕುಮಾರ್, ಪವನ್ ಕುಮಾರ್, ಗೋವಿಂದ್ ಶಾ, ಕುಮುದ್ ಕುಮಾರ್ ಶಾ ಹಾಗೂ ಅರವಿಂದ್ ಶಾ ಬಂಧಿತ ಆರೋಪಿಗಳು. ಯಳಂದೂರು - ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯ ಮೆಲ್ಲಹಳ್ಳಿ ಗೇಟ್ ಬಳಿ ಡಕಾಯಿತಿ ನಡೆಸಲು ಹೊಂಚು ಹಾಕುತ್ತಿದ್ದ ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲ ಡಿವೈಎಸ್‌ಪಿ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಡಕಾಯಿತರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಖೋಟಾ ನೋಟ ಜಾಲದ ಶಂಕೆ: 40 ಲಕ್ಷಕ್ಕೆ ಒಂದು ಕೋಟಿ ಆಫರ್.. ವಂಚನೆ
ಬಂಧಿತರಿಂದ ಚಾಕು, ದೊಣ್ಣೆ, ಕಬ್ಬಿಣದ ರಾಡು, ಟಾರ್ಚ್ ಹಾಗೂ ಮುಖಕ್ಕೆ ಹಾಕಿಕೊಂಡಿದ್ದ ಮುಖ ಕವಚ, ಖಾರದಪುಡಿ ಪೊಟ್ಟಣಗಳು, ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಯಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.