ಕಡಿಮೆ ಹಣಕ್ಕೆ ಕಲಬೆರೆಕೆ ಡೀಸೆಲ್ ಮಾರಾಟ ಆರೋಪ : ಚಾಮರಾಜನಗರದಲ್ಲಿ ಐವರ ಬಂಧನ - ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮ
ಸದ್ಯ 5,000 ಲೀ. ಡೀಸೆಲ್ ತುಂಬಿದ ಟ್ಯಾಂಕರ್ ಮತ್ತು ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಐವರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಸಂಬಂಧ ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ಚಾಮರಾಜನಗರ : ಕಡಿಮೆ ಹಣಕ್ಕೆ ನೀಡುವುದಾಗಿ ಕಲಬೆರಕೆ ಪೆಟ್ರೋಲಿಯಂ ಉತ್ಪನ್ನಗಳಾದ ಆಯಿಲ್, ಡೀಸೆಲ್ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಆಹಾರ ಇಲಾಖೆ ಪತ್ತೆಹಚ್ಚಿರುವ ಘಟನೆ ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ನಡೆದಿದೆ.
ತಮಿಳುನಾಡು ಮೂಲದ ಕಾರ್ತಿ, ಈಶ್ವರ್‌ಮೂರ್ತಿ, ರವಿ, ಬಿಹಾರ ಮೂಲದ ರಾಜು ಹಾಗೂ ಚಾಮರಾಜನಗರದ ಪೃಥ್ವಿ ಬಂಧಿತ ಆರೋಪಿಗಳು. ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದ ಕೃಷ್ಣ ಗ್ರಾನೈಟ್ಗೆ ಡೀಸೆಲ್ ಇಳಿಸುವಾಗ ಆಹಾರ ಇಲಾಖೆ ಉಪ ನಿರ್ದೇಶಕ ಯೋಗಾನಂದ್ ನೇತೃತ್ವದಲ್ಲಿ ರಾಜಣ್ಣ ಹಾಗೂ ಮತ್ತಿತ್ತರ ಸಿಬ್ಬಂದಿ ದಾಳಿ ನಡೆಸಿ ಪರಿಶೀಲಿಸಿದ್ದಾರೆ. ಈ ವೇಳೆ ಕರಿಕಲ್ಲು ಕ್ವಾರಿಗಳಿಗೆ ಕಲಬೆರಕೆ ಪೆಟ್ರೋಲಿಯಂ ಉತ್ಪನ್ನ ಪೂರೈಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಸದ್ಯ 5,000 ಲೀ. ಡೀಸೆಲ್ ತುಂಬಿದ ಟ್ಯಾಂಕರ್ ಮತ್ತು ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಐವರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಸಂಬಂಧ ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: 2 ಬೈಕ್ಗಳ ಮುಖಾಮುಖಿ ಡಿಕ್ಕಿ : ಸ್ಥಳದಲ್ಲಿಯೇ ಮೂವರು ಸಾವು!