ETV Bharat / state

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೆಂಕಿ; ಸುಟ್ಟು ಕರಕಲಾದ ಅರಣ್ಯ ಪ್ರದೇಶ - Bandipur hill fire news

ಅರಣ್ಯ ಇಲಾಖೆಯ ನಿರ್ಲಕ್ಷ್ಯತನಕ್ಕೆ ಹತ್ತು ಎಕರೆಯಷ್ಟು ಅರಣ್ಯ ಪ್ರದೇಶದ ಬೆಂಕಿಗೆ ಆಹುತಿಯಾಗಿದೆ ಎನ್ನಲಾಗುತ್ತಿದೆ. ಇನ್ನೂ ಬೆಂಕಿ ಉರಿಯುತ್ತಲೇ ಇದ್ದು ಅರಣ್ಯ ಇಲಾಖೆಯ ಸಿಬ್ಬಂದಿ ಮಾತ್ರ ಈ ಘಟನೆಯನ್ನು ತಳ್ಳಿಹಾಕಿದ್ದಾರೆ.

fire in Bandipur hill
ಸಂಗ್ರಹ ಚಿತ್ರ
author img

By

Published : Dec 27, 2020, 5:28 AM IST

ಗುಂಡ್ಲುಪೇಟೆ: ಅರಣ್ಯ ಇಲಾಖೆಯ ಸಿಬ್ಬಂದಿಯ ಯಡವಟ್ಟಿನಿಂದಾಗಿ ಸುಮಾರು ಹತ್ತು ಎಕರೆಯಷ್ಟು ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದಿದೆ ಎನ್ನಲಾಗುತ್ತಿದೆ.

ಶನಿವಾರ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಗೋಪಾಲಸ್ವಾಮಿ ಬೆಟ್ಟ ವಲಯದ ಚೌಡಹಳ್ಳಿ ಗ್ರಾಮದ ಬಳಿ ಪೈರ್​​ಲೈನ್ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ.

fire in Bandipur hill
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೆಂಕಿ

ಕಂದಾಯ ಭೂಮಿ ಸೇರಿದಂತೆ ಅರಣ್ಯ ಗಡಿ ಭಾಗದಲ್ಲಿ ಪೈರ್ ನಿರ್ಮಿಸುತ್ತ ಮುಂದೆ ಸಾಗುತ್ತಿದ್ದಾಗ ಗಾಳಿಗೆ ಬೆಂಕಿಯ ಕಿಡಿ ಹತ್ತಿಕೊಂಡು ಗುಡ್ಡಕ್ಕೆ ಆವರಿಸಿಕೊಂಡಿದೆ. ಇದರಿಂದಾಗಿ ಗುಡ್ಡ ಪೂರ್ಣ ಬೆಂಕಿಗೆ ಆಹುತಿಯಾಗಿದೆ ಎನ್ನಲಾಗುತ್ತಿದೆ.

ಈ ಬಗ್ಗೆ ವಲಯಾರಣ್ಯಾಧಿಕಾರಿ ನವೀನ್ ಕುಮಾರ್ ಮಾತನಾಡಿ, ಅರಣ್ಯ ಪ್ರತದೇಶಕ್ಕೆ ಬೆಂಕಿ ಬಿದ್ದಿಲ್ಲ, ಲೈನ್ ಮಾಡುವ ಬೆಂಕಿ ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ,
ಇನ್ನೂ ಬೆಂಕಿ ಉರಿಯುತ್ತಲೇ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.