ಚಾಮರಾಜನಗರ: ರಸ್ತೆಯಲ್ಲಿ ಒಕ್ಕಣೆಯಿಂದ ಬೇಸತ್ತ ವ್ಯಕ್ತಿಯೋರ್ವ ಹುರುಳಿ ಸೊಪ್ಪಿಗೆ ಬೆಂಕಿ ಹಾಕಿರುವ ಘಟನೆ ಹನೂರು ತಾಲೂಕಿನ ಚೆನ್ನಲಿಂಗನಹಳ್ಳಿಯಲ್ಲಿ ನಡೆದಿದೆ.
ಅರ್ಧ ಕಿಲೋಮೀಟರ್ಗೂ ಹೆಚ್ಚು ಉದ್ದದ ರಸ್ತೆಯಲ್ಲಿ ರೈತರು ಹುರುಳಿ ಸೊಪ್ಪನ್ನು ರಸ್ತೆಗೆ ಹರವಿ ಹೋಗಿದ್ದರು. ರಸ್ತೆಯಲ್ಲಿನ ಒಕ್ಕಣೆಯಿಂದ ಕಿರಿಕಿರಿ ಉಂಟಾಗುತ್ತಿದ್ದರಿಂದ ಅಪರಿಚಿತ ವಾಹನ ಸವಾರನೋರ್ವ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಬೆಂಕಿ ತಾಗುತ್ತಿದ್ದಂತೆ ಧಗಧಗನೆ ಹೊತ್ತಿ ಉರಿದ ಹುರುಳಿಯ ಬೆಂಕಿ ಪಕ್ಕದಲ್ಲೇ ಇದ್ದ ಬಾಳೆತೋಟಕ್ಕೂ ಹಬ್ಬಿ ಒಂದು ಎಕರೆಗೂ ಹೆಚ್ಚು ಬಾಳೆ ಬೆಳೆಯು ಬೆಂಕಿಗೆ ತುತ್ತಾಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಬರುವಷ್ಟರಲ್ಲಿ ಹುರುಳಿ ಬೆಳೆ ಸಂಪೂರ್ಣ ಸುಟ್ಟು ಬೂದಿಯಾಗಿತ್ತು. ರಸ್ತೆಯಲ್ಲಿನ ಒಕ್ಕಣೆಯಿಂದ ವಾಹನ ಸವಾರರು ಪಜೀತಿಗೆ ಒಳಗಾದರೂ ಪೊಲೀಸರು ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಲೇ ಇದ್ದಾರೆ. ಈ ಪ್ರಕರಣವು ಹನೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಬೆಂಕಿಯ ಅವಘಡಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.