ಚಾಮರಾಜನಗರ: ಜಮೀನಿನಲ್ಲಿ ಬೆಳೆ ಸಂಗ್ರಹಿಸುತ್ತಿದ್ದ ರೈತನೋರ್ವ ಅಗ್ನಿ ಆಕಸ್ಮಿಕದಲ್ಲಿ ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಅಮಚವಾಡಿ ಗ್ರಾಮದಲ್ಲಿ ನಡೆದಿದೆ.
ಅಮಚವಾಡಿ ಗ್ರಾಮದ ಮಹದೇವನಾಯಕ(63) ಮೃತ ವ್ಯಕ್ತಿ. ಪಕ್ಕದ ಜಮೀನಿನಲ್ಲಿ ದಿಢೀರ್ ಹೊತ್ತಿಕೊಂಡ ಬೆಂಕಿ ಮೃತರ ಜಮೀನಿಗೂ ವ್ಯಾಪಿಸಿತ್ತು ಎನ್ನಲಾಗಿದೆ. ಈ ವೇಳೆ ಹುರುಳಿ ಸಂಗ್ರಹಿಸುತ್ತಿದ್ದ ಮಹದೇವನಾಯ್ಕ ಬೆಂಕಿಗೆ ಸಿಲುಕಿ ಉಸಿರಾಡಲಾಗದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಬೆಳೆ ಕೈ ಸೇರಿತು ಎನ್ನುವಷ್ಟರಲ್ಲಿ ರೈತನೇ ಮೃತಪಟ್ಟಿರುವುದು ಮನಕಲಕುವಂತಿದ್ದು ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಯಾವುದೇ ಕಾರಣಕ್ಕೂ ಏರಿಕೆಯಿಲ್ಲ: ಕೇಂದ್ರ ಸಚಿವ ಜಾವಡೇಕರ್