ಚಾಮರಾಜನಗರ: ರಸ್ತೆಯಲ್ಲಿನ ರೈತರ ಸುಗ್ಗಿ ಸಂಭ್ರಮದಿಂದ ಎದುರಾಗಿದ್ದ ವಾಹನ ಸವಾರರ ಸಂಕಷ್ಟಕ್ಕೆ ಮುಕ್ತಿ ದೊರೆತಿದೆ. ರಸ್ತೆಯಲ್ಲಿನ ಒಕ್ಕಣೆಯನ್ನು ಗುಂಡ್ಲುಪೇಟೆ ಪೊಲೀಸರು ತೆರವುಗೊಳಿಸಿದ್ದಾರೆ.
ಗುಂಡ್ಲುಪೇಟೆ ಠಾಣೆ ವ್ಯಾಪ್ತಿಗೆ ಒಳಪಡುವ ಅಂಕಹಳ್ಳಿ, ಬಾಚಹಳ್ಳಿ, ಬೊಮ್ಮಲಾಪುರ, ಕೋಡಹಳ್ಳಿ, ಶಿವಪುರ, ಭೀಮನಬೀಡು, ಬರಗಿ, ತೆಂಕಲಹುಂಡಿ, ಹಂಗಳಪುರ, ಗೋಪಾಲಸ್ವಾಮಿ ಬೆಟ್ಟ ರಸ್ತೆಯಲ್ಲಿ ಹುರುಳಿ ಒಕ್ಕಣೆಯನ್ನು ಪೊಲೀಸರು ತೆರವುಗೊಳಿಸಿ ರಸ್ತೆಯಲ್ಲಿ ಒಕ್ಕಣೆ ಮಾಡದಂತೆ ಎಚ್ಚರಿಸಿದ್ದಾರೆ.
ಇನ್ನು, ಕೂಡ ಬೇಗೂರು, ಚಾಮರಾಜನಗರ ಪೂರ್ವ ಠಾಣಾ ಸರಹದ್ದಿನಲ್ಲಿ ಒಕ್ಕಣೆ ನಡೆಯುತ್ತಿದ್ದು, ಅಲ್ಲಿಯೂ ಕೂಡ ಪೊಲೀಸರು ಗಮನ ಹರಿಸಬೇಕಿದೆ. ರಸ್ತೆಯಲ್ಲಿನ ಒಕ್ಕಣೆಯಿಂದ ಒಂದು ಮಾರುತಿ ವ್ಯಾನ್ ಭಸ್ಮವಾಗಿದ್ದರೇ ಸ್ವಿಪ್ಟ್ ಕಾರೊಂದಕ್ಕೆ ಬೆಂಕಿ ಹತ್ತಿತ್ತು. ಕೆಎಸ್ಆರ್ಟಿ ಬಸ್ನ ಆ್ಯಕ್ಸೆಲ್ ಕೂಡ ತುಂಡಾಗಿತ್ತು. ಕೆಲವು ಕಡೆ ಬೈಕ್ ಸವಾರರು ಬಿದ್ದು ಪೆಟ್ಟು ಮಾಡಿಕೊಂಡಿದ್ದರು.
ಪ್ರತಿದಿನ ಪ್ರಯಾಸ ಪಡುತ್ತಿದ್ದ ವಾಹನ ಸವಾರರ ಸಂಕಷ್ಟ ಕುರಿತು ಈಟಿವಿ ಭಾರತ ಹಲವು ವರದಿಗಳನ್ನು ಬಿತ್ತರಿಸಿ ಪೊಲೀಸರ ಗಮನ ಸೆಳೆದಿತ್ತು.