ಚಾಮರಾಜನಗರ: ವಯಸ್ಸು 80 ಆದರೂ ಜೀವನಕ್ಕಾಗಿ ಟೈಲರಿಂಗ್ ಆಶ್ರಯಿಸಿದ್ದ ನಗರದ ರಾಮಸಮುದ್ರದ ವೆಂಕಟಮ್ಮ ಅವರ ಕಷ್ಟಕ್ಕೆ ಸ್ಪಂದಿಸಿ ಹಲವರು ನೆರವು ನೀಡುತ್ತಿದ್ದಾರೆ.
ಹೆಬ್ಬಸೂರಿನ ನಿವೃತ್ತ ಮುಖ್ಯ ಶಿಕ್ಷಕ ರಾಜೇಂದ್ರ, ಭಗತ್ ಯುವಸೇನೆಯ ಕಾಂತರಾಜು ಹಾಗೂ ಕವಿ, ಗ್ರಾಮಲೆಕ್ಕಿಗರಾದ ಶ್ರೀಧರ್ ಇಂದು ವೆಂಕಟಮ್ಮ ಮನೆಗೆ ತೆರಳಿ ಔಷಧಿ, ತಿಂಗಳಿಗಾಗುವಷ್ಟು ಆಹಾರ ಕಿಟ್ ವಿತರಿಸಿದ್ದಲ್ಲದೆ, ಶಾಶ್ವತವಾಗಿ ನೆರವು ನೀಡುವ ಭರವಸೆಯನ್ನೂ ನೀಡಿದ್ದಾರೆ.
ವಿಧವಾ ವೇತನ ಪಡೆಯುತ್ತಿರುವ ವೆಂಕಟಮ್ಮಗೆ ವೃದ್ಧಾಪ್ಯ ವೇತನ ಬರುವಂತೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಆಶ್ವಾಸನೆ ನೀಡಿದ್ದಾರೆ. 80ರ ಹರೆಯದಲ್ಲೂ ಟೈಲರಿಂಗ್ ಮಾಡುತ್ತಿದ್ದ ವೆಂಕಟಮ್ಮ ಲಾಕ್ ಡೌನ್ ಬಳಿಕ ಸಂಕಷ್ಟಕ್ಕೆ ಸಿಲುಕಿದ್ದ ಕುರಿತು '80ರ ವೃದ್ಧೆಯ ಸ್ವಾಭಿಮಾನದ ಬದುಕು ಕಸಿದ ಕೊರೊನಾ' ಎಂಬ ಶೀರ್ಷಿಕೆಯಡಿ ಮಾನವೀಯ ವರದಿ ಬಿತ್ತರಿಸುವ ಮೂಲಕ 'ಈಟಿವಿ ಭಾರತ'ದಿಂದ ಗಮನ ಸೆಳೆಯಲಾಗಿತ್ತು.