ಚಾಮರಾಜನಗರ: ಅನುಮಾನಾಸ್ಪದವಾಗಿ ದೊಡ್ಡ ದಂತದ ಆನೆಯೊಂದು ಮೃತಪಟ್ಟಿರುವ ಘಟನೆ ತಾಲೂಕಿನ ಕುಳ್ಳೂರು (ಬೂದಿಪಡಗ ರಂಗಸಂದ್ರ)ದಲ್ಲಿ ನಡೆದಿದೆ.
![Elephant died in Chamarajanagara](https://etvbharatimages.akamaized.net/etvbharat/prod-images/5658964_death.jpg)
ಗ್ರಾಮದ ಶಿವರುದ್ರ ಎಂಬುವರ ಜಮೀನಿನಲ್ಲಿ ಆನೆ ಮೃತದೇಹ ಪತ್ತೆಯಾಗಿದ್ದು, 40-45 ವರ್ಷವಾಗಿದೆ ಎಂದು ಅಂದಾಜಿಸಲಾಗಿದೆ. ಮೂಲಗಳ ಪ್ರಕಾರ, ಜಮೀನಿನ ಬೆಳೆ ರಕ್ಷಣೆಗೆ ಹಾಯಿಸಿದ್ದ ವಿದ್ಯುತ್ ಪ್ರವಹಿಸಿ ಗಜರಾಜ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಆನೆಗೆ ಉದ್ದದ ದಂತಗಳಿದ್ದು ನೋಡಲು ಬಹಳ ಆಕರ್ಷಕವಾಗಿರುವುದರಿಂದ ಜನರು ಮರುಕಪಡುತ್ತಿದ್ದಾರೆ. ಇನ್ನು, ಸ್ಥಳಕ್ಕೆ ಬಿಆರ್ಟಿ ಡಿಎಫ್ಒ, ಪುಣಜನೂರು ಆರ್ಎಫ್ಒ ದೌಡಾಯಿಸಿದ್ದು, ಆನೆಯ ಮರಣೋತ್ತರ ಪರೀಕ್ಷೆ ಇನ್ನಷ್ಟೇ ನಡೆಯಬೇಕಿದೆ.