ETV Bharat / state

ಗಡಿಭಾಗದಲ್ಲಿ ಬಸ್​ ಮೇಲೆ ಸಲಗ ದಾಳಿ, ಗ್ಲಾಸ್ ಪುಡಿ-ಪುಡಿ.. ಪ್ರಯಾಣಿಕರು, ಚಾಲಕ ಕಕ್ಕಾಬಿಕ್ಕಿ- Video - chamarajanagara latest news

ತಮಿಳುನಾಡು ಸಾರಿಗೆ ಸಂಸ್ಥೆ ಬಸ್ಸಿಗೆ ಸಲಗವೊಂದು ಕೊಟೈಗಿರಿ ಎಂಬಲ್ಲಿ ಅಡ್ಡಹಾಕಿ, ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿತ್ತು. ಬಸ್​ ಮೇಲೆ ದಾಳಿ ಮಾಡಿ ಫ್ರಂಟ್ ಗ್ಲಾಸ್ ಪುಡಿ-ಪುಡಿ ಮಾಡಿತ್ತು. ಬಳಿಕ ಆನೆ ಕಾಡಿನೊಳಗೆ ತೆರಳಿದ್ದು, ಬಸ್ ಅಲ್ಲಿಂದ ತೆರಳಿದೆ.

elephant attack on bus
ಬಸ್ ಮೇಲೆ ಆನೆ ದಾಳಿ
author img

By

Published : Sep 26, 2021, 1:43 PM IST

ಚಾಮರಾಜನಗರ: ತಮಿಳುನಾಡು ಸಾರಿಗೆ ಬಸ್ಸೊಂದಕ್ಕೆ ಸಲಗವೊಂದು ಅಡ್ಡ ಹಾಕಿ, ಎದುರಿನ ಗ್ಲಾಸ್ ಒಡೆದು ಹಾಕಿ, ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿದ್ದ ಘಟನೆ ತಮಿಳುನಾಡು- ಕರ್ನಾಟಕ‌ ಗಡಿ ಭಾಗದಲ್ಲಿ ನಡೆದಿದೆ.

ಬಸ್ ಮೇಲೆ ಆನೆ ದಾಳಿ

ಚಾಮರಾಜನಗರ ತಾಲೂಕಿನ ಗುಂಡ್ಲುಪೇಟೆಯಿಂದ ನೀಲಗಿರಿ, ನೀಲಗಿರಿಯಿಂದ ಮೆಟ್ಟುಪಾಲ್ಯಂಗೆ ತೆರಳುವ ತಮಿಳುನಾಡು ಸಾರಿಗೆ ಸಂಸ್ಥೆ ಬಸ್ಸಿಗೆ ಸಲಗವೊಂದು ಕೊಟೈಗಿರಿ ಎಂಬಲ್ಲಿ ಅಡ್ಡಹಾಕಿದೆ. ದಂತದಿಂದ ಎರಡು ಬಾರಿ ಬಸ್ಸಿಗೆ ಗುದ್ದಿದ್ದರಿಂದ ಫ್ರಂಟ್ ಗ್ಲಾಸ್ ಪುಡಿ-ಪುಡಿಯಾಗಿದೆ‌.

ಇದನ್ನೂ ಓದಿ: ಅಭಯ್ ಪಾಟೀಲ್​ಗೆ ಸಚಿವ ಸ್ಥಾನ ನೀಡುವಂತೆ ಸಿಎಂಗೆ ಅಭಿಮಾನಿಗಳ ಮನವಿ

ಆನೆಯ ದಾಳಿಗೆ ಬೆಚ್ಚಿಬಿದ್ದ ಬಸ್ ಚಾಲಕ ತನ್ನ ಸೀಟು ಬಿಟ್ಟು ಪ್ರಯಾಣಿಕರ ಬಳಿ ಬಂದು ನಿಂತುಕೊಂಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಅರ್ಧ ತಾಸು ಆನೆ ದಾಳಿಯಿಂದ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಆನೆ ಕಾಡಿನೊಳಕ್ಕೆ ತೆರಳಿದ ಬಳಿಕ ಬಸ್ ಸಂಚರಿಸಿದೆ ಎಂದು ತಿಳಿದುಬಂದಿದೆ‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.