ETV Bharat / state

ಮದ್ಯ ಸಿಗದ ಭೀತಿ.. ಬ್ಯಾಗ್, ಚೀಲಗಳಲ್ಲಿ ಎಣ್ಣೆ ಬಾಟಲ್​ ತುಂಬಿಸಿ ಕೊಂಡೊಯ್ದ ಗುಂಡುಪ್ರಿಯರು!! - corona curfew

ಇಂದು ರಾತ್ರಿಯಿಂದ ಕೊರೊನಾ ಕರ್ಫ್ಯೂ ಹಿನ್ನೆಲೆ ಚಾಮರಾಜನಗರದಲ್ಲಿ ಮದ್ಯದಂಗಡಿ ಮುಂದೆ ಮದ್ಯವ್ಯಸನಿಗಳು ಎಣ್ಣೆ ಕೊಳ್ಳಲು ಸಾಲುಗಟ್ಟಿ ನಿಂತಿದ್ದರು. ಕೇಸುಗಟ್ಟಲೇ ಬಾಟಲ್​ಗಳನ್ನು ಕೊಂಡೊಯ್ದರು.

winestores
winestores
author img

By

Published : Apr 27, 2021, 8:23 PM IST

Updated : Apr 27, 2021, 8:45 PM IST

ಚಾಮರಾಜನಗರ: ಇಂದು ರಾತ್ರಿಯಿಂದ ಕೊರೊನಾ ಕರ್ಫ್ಯೂ ಘೋಷಿಸಿರುವುದರಿಂದ ಮದ್ಯಪ್ರಿಯರು ಎಣ್ಣೆ ಅಂಗಡಿ ಮುಂದೆ ಸಾಲುಗಟ್ಟಿ ನಿಂತು ಬ್ಯಾಗ್​, ಚೀಲಗಳಲ್ಲಿ ಮದ್ಯ ಬಾಟಲಿಗಳನ್ನು ಕೊಂಡೊಯ್ದ ಘಟನೆ ನಗರದಲ್ಲಿ ನಡೆಯಿತು.

ಬ್ಯಾಗ್, ಚೀಲಗಳಲ್ಲಿ ಎಣ್ಣೆ ಬಾಟಲ್​ ತುಂಬಿಸಿ ಕೊಂಡೊಯ್ದ ಗುಂಡುಪ್ರಿಯರು

ಸಂಜೆ 6 ಆಗುತ್ತಿದ್ದಂತೆ ಮದ್ಯದಂಗಡಿಗಳಿಗೆ ವೈನ್ ಸ್ಟೋರ್, ಎಂಎಸ್ಐಎಲ್ ಅಂಗಡಿಗಳಿಗೆ ಧಾವಿಸಿ ಬಂದ ಯುವಕರು, ಹಿರಿಯರು ಕೇಸುಗಟ್ಟಲೆ ಬಿಯರ್, ಮದ್ಯದ ಪೌಚುಗಳನ್ನು ಕೊಂಡೊಯ್ದು, ಗುಂಡು ಸಿಕ್ಕ ಖುಷಿಯಲ್ಲಿ ತೇಲಾಡಿದರು. ಇಂದು ಕುಡಿಯಲಿಲ್ಲ ಈ ಎಣ್ಣೆ ಬಾಟಲ್​ ಶನಿವಾರ, ಭಾನುವಾರ ಕುಡಿಯಲು ಎಂದು ಕೆಲ ಯುವಕರು ಪ್ರತಿಕ್ರಿಯಿಸಿದರೆ ಮತ್ತೂ ಕೆಲವರು ನಿತ್ಯ ಮದ್ಯ ಸೇವಿಸುವ ಅಭ್ಯಾಸವಿದ್ದು ಕಾಳಸಂತೆಯಲ್ಲಿ ಅಷ್ಟು ದುಡ್ಡು ಕೊಟ್ಟು ಕೊಳ್ಳುವ ಬದಲು ಹಣವಿದ್ದಷ್ಟು ಮೊದಲೇ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದರು.

ಮೊದಲ ಲಾಕ್​ಡೌನ್​ ವೇಳೆ ಎಣ್ಣೆ ಸಿಗದೇ ಒದ್ದಾಡಿದ ಪರಿಸ್ಥಿತಿ ಅನುಭವಿಸಿದ್ದರಿಂದ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಜನಸಂದಣಿ ಮದ್ಯದಂಗಡಿಗಳ ಮುಂದೆ ಏರ್ಪಟ್ಟು ಭರ್ಜರಿ ವ್ಯಾಪಾರವೇ ಆಗಿದೆ.

Last Updated : Apr 27, 2021, 8:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.