ಚಾಮರಾಜನಗರ: ಪೊಲೀಸರು ಬಂದರೆ ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸುರಕ್ಷಾ ಪಡೆ ಬಂದಾಗ ಮಾಸ್ಕ್ ಧರಿಸುವುದು, ಅನಗತ್ಯವಾಗಿ ಗುಂಪುಗೂಡುವವರ ವಿರುದ್ಧ ಇನ್ಮುಂದೆ ಡ್ರೋಣಾಚಾರ್ಯ ಕಣ್ಣಿಡಲಿದ್ದಾನೆ.
ಜಿಲ್ಲಾ ಪೊಲೀಸರು ಸುಧಾರಿತ ಡ್ರೋಣ್ ಮೂಲಕ ಕೋವಿಡ್ ಕ್ಲೋಸ್ ಡೌನ್ನಲ್ಲಿ ಜನರ ಮೇಲೆ ಕಣ್ಣಿಡಲು ಆರಂಭಿಸಿದ್ದು 4 ಕಿಮೀ ವ್ಯಾಪ್ತಿಯಲ್ಲಿ ಡ್ರೋಣ್ ಹಾರಿಬಿಟ್ಟು ಜನಸಂಚಾರವನ್ನು ಸ್ಮಾರ್ಟ್ ಫೋನ್ ಮೂಲಕ ನೋಡಿ ಎಚ್ಚರಿಸಲಿದ್ದಾರೆ.
ಡ್ರೋಣ್ ಮೂಲಕ ಅರಿವು ಮೂಡಿಸಲು ಹೊರಟಿರುವ ಕ್ರಮ ಧನಾತ್ಮಕ ನಿರೀಕ್ಷೆ ಹುಟ್ಟಿಸಿದೆ. ಜಿಲ್ಲಾ ಕೇಂದ್ರದಲ್ಲಿ ಡ್ರೋನ್ ಕಣ್ಗಾವಲಿಗೆ ಚಾಲನೆ ನೀಡಲಾಗಿದ್ದು ಹಂತಹಂತವಾಗಿ ಗುಂಡ್ಲುಪೇಟೆ, ಕೊಳ್ಳೇಗಾಲದಲ್ಲಿ ಪ್ರಯೋಗಿಸಲು ಪೊಲೀಸರು ಮುಂದಾಗಿದ್ದಾರೆ.