ETV Bharat / state

ಇದು ಸಾರ್ವಜನಿಕ ರಸ್ತೆಯೋ..! ಕುಡುಕರ ಅಡ್ಡವೋ...? - drinking in between road

ಕೊಳ್ಳೇಗಾಲ ಪಟ್ಟಣದ ಮಧ್ಯ ಭಾಗದಲ್ಲಿರುವ ರಸ್ತೆಯೊಂದರಲ್ಲಿ ದಿನ ರಾತ್ರಿಯಾಗುವುದೇ ತಡ ಕುಡುಕರ ಗುಂಪುಗಳು ಸೇರಿ ರಾಜರೋಷವಾಗಿ ಎಣ್ಣೆ ಹೊಡೆತ್ತವೆ.

drinking in between road
ಬಾಟಲ್​​ಗಳು
author img

By

Published : May 18, 2020, 8:31 PM IST

ಕೊಳ್ಳೇಗಾಲ (ಚಾಮರಾಜನಗರ) : ಪಟ್ಟಣದ ಪೀಸ್​​​ಪಾರ್ಕ್ ಸಮೀಪದ ಎಲ್ಐಸಿ ರಸ್ತೆಯನ್ನೇ ಕುಡುಕರು ಮದ್ಯ ಸೇವನೆ ತಾಣವಾಗಿ ಮಾಡಿಕೊಂಡಿದ್ದಾರೆ.

ಪಾರ್ಕ್​​ಗೆ ಬರುವ ವಾಯು ವಿಹಾರಿಗಳಿಗೆ ಬೆಳಂಬೆಳಿಗ್ಗೆ ಮದ್ಯದ ಬಾಟಲ್​​ಗಳು ದರ್ಶನವಾಗುತ್ತವೆ. ಕುಡಿದ ಬಾಟಲ್​​ಗಳನ್ನು ಒಡೆದು, ಬಿಸಾಡಿ ಹೋಗುವುದರಿಂದ ಸಾರ್ವಜನಿಕರ ಸಂಚಾರಕ್ಕೂ ತೊಂದರೆಯಾಗಿದೆ.

ಸಮೀಪದಲ್ಲೇ ಬಾರ್​ ಇರುವ ಕಾರಣ ಮದ್ಯ ಖರೀದಿಸಿ ಇಲ್ಲಿಗೆ ಬಂದು ಕುಡಿಯುವುದನ್ನು ಹವ್ಯಾಸ ಮಾಡಿಕೊಂಡಿದ್ದಾರೆ. ಇದರಿಂದ ಸಾರ್ವಜನಿಕರು, ಅಕ್ಕ-ಪಕ್ಕದ ನಿವಾಸಿಗಳು ಬಹಳ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಇಲ್ಲಿನ ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.

ಈ ರಸ್ತೆಯ ಪಕ್ಕದಲ್ಲೇ ಶಾಲೆ, ಎಲ್ಐಸಿ ಕಚೇರಿ ಕೂಡ ಇದೆ. 300 ಮೀಟರ್ ಅಂತರದಲ್ಲಿ ಪೊಲೀಸ್ ಠಾಣೆಯೂ ಇದೆ. ಆದರೂ, ಯಾರ ಭಯವಿಲ್ಲದೆ ಸಾರ್ವಜನಿಕ ಪಾರ್ಕ್ ಸುತ್ತುಗೋಡೆ ಕಟ್ಟೆಯಲ್ಲೇ ದಿನ ರಾತ್ರಿ ಕಿಕ್ಕೇರಿಸಿಕೊಳ್ಳುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.