ಚಾಮರಾಜನಗರ : ಚೀನಾದಿಂದ ನಿರಾಶ್ರಿತರಾಗಿ ಓಡಿಬಂದ ಟಿಬೇಟಿಯನ್ನರು ಕೊರೊನಾ ಸಂಕಷ್ಟ ಕಾಲದಲ್ಲಿ ಇಲ್ಲಿನ ಆದಿವಾಸಿಗಳು, ಸ್ಥಳೀಯರ ಕಷ್ಟಕ್ಕೆ ಸ್ಪಂದಿಸಿ ಮಾನವೀಯತೆ ಪ್ರದರ್ಶಿಸಿದ್ದಾರೆ.
ಹನೂರು ತಾಲೂಕಿನ ಒಡೆಯರಪಾಳ್ಯದಲ್ಲಿನ ಟಿಬೇಟಿಯನ್ ನಿರಾಶ್ರಿತರ ಕ್ಯಾಂಪ್ನ ಕ್ಯೂ ವಿಲೇಜ್ ಜನರು ದೇಣಿಗೆ ಎತ್ತಿ ಸುಮಾರು 450ಕ್ಕೂ ಹೆಚ್ಚು ಆದಿವಾಸಿ ಕುಟುಂಬಳಿಗೆ ಆಹಾರ ಕಿಟ್ ವಿತರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಲಾಕ್ಡೌನ್‌ನಿಂದಾಗಿ ಕೂಲಿ ಇಲ್ಲದೇ ಊಟಕ್ಕೂ ಪರದಾಡುತ್ತಿದ್ದ ಆದಿವಾಸಿಗಳು ಕಷ್ಟ ಕಂಡು ಟಿಬೇಟಿಯನ್ ಕ್ಯಾಂಪ್‌ನ ಕ್ಯೂ ವಿಲೇಜ್‌ನ ಜನರು ಅಕ್ಕಿ, ಗೋಧಿ ಹಿಟ್ಟು, ಎಣ್ಣೆ, ಉಪ್ಪು ಸೇರಿದಂತೆ 3 ಸಾವಿರ ರೂ. ಬೆಲೆ ಬಾಳುವ ಆಹಾರದ ಕಿಟ್ಗಳನ್ನು ಮನೆಮನೆಗೆ ತಲುಪಿಸಿ ತಾವೇ ವಲಸಿಗರಾಗಿದ್ದರೂ ಕೈಲಾದ ಸಹಾಯ ಮಾಡುವ ದೊಡ್ಡಗುಣ ಪ್ರದರ್ಶಿಸಿದ್ದಾರೆ.