ಚಾಮರಾಜನಗರ: ಕೊಳ್ಳೇಗಾಲ ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ನಿರ್ಗತಿಕರು, ಪೌರಕಾರ್ಮಿಕರು, ಚಾಲಕರು, ಕಟ್ಟಡ ಕಾರ್ಮಿಕರಿಗೆ ಶಾಸಕ ಎನ್.ಮಹೇಶ್ ಅಭಿಮಾನಿ ಬಳಗದಿಂದ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಲಾಯಿತು.
ದಿನಸಿ ವಿತರಸಿ ಮಾತನಾಡಿದ ಶಾಸಕ ಎನ್.ಮಹೇಶ್, ಶ್ರಮಿಕರಾದ ಕಾರ್ಮಿಕರ ವರ್ಗ ಈ ದೇಶದ ಸಂಪತ್ತು. ದೇಶದ ಸಂಪತ್ತನ್ನ ಅಭಿವೃದ್ಧಿಪಡಿಸುವ ವರ್ಗ ಲಾಕ್ಡೌನ್ನಿಂದಾಗಿ ಸಂಕಷ್ಟದಲ್ಲಿದೆ. ಆದ್ದರಿಂದ ನನ್ನ ಬೆಂಬಲಿಗರು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಬಡ ಕೂಲಿ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿ ಸಹಾಯ ಮಾಡುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಎಷ್ಟು ಸಹಾಯ ಮಾಡಿದರೂ ಸಾಲದು. ಅನುಕೂಲವಿರುವ ಶ್ರೀಮಂತರು ತಮ್ಮ ಸುತ್ತಮುತ್ತ ಸಂಕಷ್ಟದಲ್ಲಿರುವ ಬಡವರಿಗೆ ಸಹಾಯ ಮಾಡಿ ಮಾನವೀಯತೆ ತೋರಬೇಕು ಎಂದರು.