ETV Bharat / state

ಕೊರೊನಾ ತೊಲಗಲೆಂದು ಬೀದಿಗೆ ದಿಗ್ಬಂಧನ : ನಿತ್ಯ ಎರಡು ಮಡಿಕೆಯಲ್ಲಿ ಧೂಪ

ಕೊರೊನಾದಿಂದ ತಪ್ಪಿಸಿಕೊಳ್ಳಲು ಚಾಮರಾಜನಗರದ ವೆಂಕಟಯ್ಯನ ಛತ್ರ ಗ್ರಾಮದ ಜನ ದಿಗ್ಬಂಧನ, ಸಾಂಬ್ರಾಣಿ ಧೂಪ ಹಾಕಿ ಸೋಂಕು ತಗುಲದಿರಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ..

different attempt to stop Corona in   Chamarajanagar
ಕೊರೊನಾ ತೊಲಗಲೆಂದು ಬೀದಿಗೆ ದಿಗ್ಬಂಧನ
author img

By

Published : May 30, 2021, 9:27 PM IST

ಚಾಮರಾಜನಗರ : ಕೊರೊನಾ ದೂರ ಇಡಲು ಬೀದಿಯ ನಾಲ್ಕು ಮೂಲೆಗಳಲ್ಲಿ ದಿಗ್ಬಂಧನ, ಸಾಂಬ್ರಾಣಿ ಧೂಪ ಹಾಕಿರುವ ಪ್ರಸಂಗ ತಾಲೂಕಿನ ವೆಂಕಟಯ್ಯನ ಛತ್ರ ಗ್ರಾಮದಲ್ಲಿ ನಡೆದಿದೆ.

ಕೊರೊನಾ ತೊಲಗಲೆಂದು ಬೀದಿಗೆ ದಿಗ್ಬಂಧನ..

ಗ್ರಾಮದ ಉಪ್ಪಾರ ಸಮುದಾಯದ ಜನರು ಕಳೆದ 7 ದಿನಗಳಿಂದ ನಿತ್ಯ ಸಂಜೆ ಬೀದಿಯ ನಾಲ್ಕು ಮೂಲೆಗಳಲ್ಲಿ ಪೂಜೆ ಮಾಡಿ ಇಬ್ಬರು ಬಾಲಕರ ಮೂಲಕ ಸಾಂಬ್ರಾಣಿ ತುಂಬಿದ ಮಡಿಕೆಗಳನ್ನು ಹಿಡಿಸಿ ಬೀದಿಗೆಲ್ಲಾ ಧೂಪ ಹಾಕುತ್ತಿದ್ದಾರೆ. ಭಯ-ಭಕ್ತಿಯಿಂದ ಬೀದಿಯ ಜನರು ಸಾಂಬ್ರಾಣಿ ಧೂಪ ಹಾಕಿ ಕೊರೊನಾ ಬರದಂತೆ ಬೇಡಿಕೊಳ್ಳುತ್ತಿದ್ದಾರೆ.

ಇನ್ನು, ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಚಾಮರಾಜನಗರದ ಗಂಗಾಮತಸ್ಥರ ಬೀದಿಯಲ್ಲಿ ಕೋಳಿಗಳನ್ನು ಬಲಿ ಕೊಡಲಾಗಿತ್ತು. ಕೊಳ್ಳೇಗಾಲದಲ್ಲಿ ಕೊರೊನಾ ಮಾರಮ್ಮನನ್ನೇ ಪ್ರತಿಷ್ಠಾಪನೆ ಮಾಡಲಾಗಿತ್ತು‌. ಈಗ ಇವರು ಮಹಾಮಾರಿಯಿಂದ ದೂರ ಇಡಲು ಸಾಂಬ್ರಾಣಿ ಮೊರೆ ಹೋಗಿದ್ದಾರೆ.

2ನೇ ಡೋಸ್ ಲಸಿಕೆ ಪಡೆಯಲು 27 ಕೋವಿಡ್ ಲಸಿಕಾ ಕೇಂದ್ರ ಮೀಸಲು : ಗೌರವ್ ಗುಪ್ತಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.