ETV Bharat / state

ಜನರ ಜೀವ ಉಳಿಸಲು ಸರ್ಕಾರದ ಜತೆಗೆ ಕಾಂಗ್ರೆಸ್ ಸಹಕಾರ ನೀಡುತ್ತದೆ: ಧೃವನಾರಾಯಣ್ - ಕೊಳ್ಳೆಗಾಲ ಲೇಟೆಸ್ಟ್ ನ್ಯೂಸ್

ಕೋವಿಡ್ ಸಂಕಷ್ಟದಲ್ಲಿ ಸರ್ಕಾರದ ಸೌಲಭ್ಯಗಳ ಜತೆಗೆ ಪಕ್ಷದಿಂದ ಕೈಲಾದಷ್ಟು ಮಾಡಬೇಕು. ಜನರ ಜೀವ ಉಳಿಸುವ ನಿಟ್ಟಿನಲ್ಲಿ ಆಯಾ ಕ್ಷೇತ್ರದ ಕಾಂಗ್ರೆಸ್ ನಾಯಕರು ಕೈಲಾದಷ್ಟು ಸಹಾಯ ಮಾಡಬೇಕು ಎಂದು ಕಾಂಗ್ರೆಸ್​​ ಪಕ್ಷದ ಮುಖಂಡರು ಸೂಚನೆ ನೀಡಿದ್ದು, ‌ ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ.

Dhruvanarayan
ಕೆಪಿಸಿಸಿ ಕಾರ್ಯಧ್ಯಕ್ಷ ಧೃವನಾರಾಯಣ್
author img

By

Published : May 18, 2021, 9:45 AM IST

ಕೊಳ್ಳೇಗಾಲ: ಕೋವಿಡ್ ವ್ಯಾಪಕವಾಗಿ ಹರುಡುತ್ತಿದೆ. ಕೋವಿಡ್ ನಿರ್ನಾಮಕ್ಕೆ ಸರ್ಕಾರದ ಸೌಲಭ್ಯಗಳ ಜತೆಗೆ ಕಾಂಗ್ರೆಸ್ ಪಕ್ಷವೂ ಜನರ ಜೀವ ಉಳಿಸುವ ಉದ್ದೇಶದಿಂದ ಸಹಾಯ ಮಾಡುತ್ತಿದೆ. ಅದರಂತೆ ವೈಯಕ್ತಿಕವಾಗಿ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ಒಂದು ಉಚಿತ ಆಂಬ್ಯುಲೆನ್ಸ್ ಸೇವೆಯನ್ನು ಒದಗಿಸಿಕೊಡುತ್ತಿದ್ದೇನೆ ಎಂದು‌ ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್ ತಿಳಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್

ಪಟ್ಟಣದ ಸರ್ಕಾರಿ ಉಪವಿಭಾಗ ಆಸ್ಪತ್ರೆಯ ಆವರಣದಲ್ಲಿ ಉಚಿತ ಆಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿ, ವಿರೋಧ ಪಕ್ಷದ ನಾಯಕರು ಹಾಗೂ ಕೆಪಿಸಿಸಿ ಅಧ್ಯಕ್ಷರು ಕೋವಿಡ್ ಸಂಕಷ್ಟದಲ್ಲಿ ಸರ್ಕಾರದ ಸೌಲಭ್ಯಗಳ ಜತೆಗೆ ಪಕ್ಷದಿಂದ ಕೈಲಾದಷ್ಟು ಸಹಾಯ ಮಾಡಬೇಕು, ಜನರ ಜೀವ ಉಳಿಸುವ ನಿಟ್ಟಿನಲ್ಲಿ ಆಯಾ ಕ್ಷೇತ್ರದ ಕಾಂಗ್ರೆಸ್ ನಾಯಕರು ಕೈಲಾದಷ್ಟು ಸಹಾಯ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ. ಅದರಂತೆ ಕಾಂಗ್ರೆಸ್ ನಾಯಕರು ಹಲವು ಸೇವೆಗಳನ್ನು ಒದಗಿಸುತ್ತಿದ್ದಾರೆ.

ಕೋವಿಡ್ ಸಂಕಷ್ಟಕ್ಕೆ ಸ್ಪಂದನೆ:

ನಾನು ಸಹ ಕೊಳ್ಳೇಗಾಲ ಹಾಗೂ ನಂಜನಗೂಡು ತಾಲೂಕಿಗೆ ಒಂದೊಂದು ಉಚಿತ ಆಂಬ್ಯುಲೆನ್ಸ್ ಸೌಲಭ್ಯವನ್ನು ಕಲ್ಪಿಸಿ ಕೋವಿಡ್ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದೇನೆ. ಅಗತ್ಯವಿದ್ದರೆ ಕೊಳ್ಳೇಗಾಲ ಆಸ್ಪತ್ರೆಗೆ ಮತ್ತೊಂದು ಆಂಬ್ಯುಲೆನ್ಸ್​​ಅನ್ನು ಪಕ್ಷದ ವತಿಯಿಂದ ಕೊಡಿಸುತ್ತೇನೆ ಎಂದರು. ಸ್ವಲ್ಪ ದಿನದ ಹಿಂದೆಯಷ್ಟೇ ಬೈಕ್​​ನಲ್ಲಿ ಏಣಿ ಇಟ್ಟು ಅದರಲ್ಲಿ ಮೃತದೇಹ ಕೊಂಡೊಗ್ಯ್ದುರತೆ, ಶವ ಸಂಸ್ಕಾರ ಮಾಡಿದ್ದನ್ನು ನಾನು ಮಾಧ್ಯಮಗಳಲ್ಲಿ ನೋಡಿ ಬೇಸರವಾಯಿತು. ಅದಕ್ಕಾಗಿ ಕೊರೊನಾ ಸಮಯದಲ್ಲಿ ಉಪಯೋಗಕ್ಕೆ ಬರಲೆಂದು ಆಂಬ್ಯುಲೆನ್ಸ್ ಸೇವೆ ಒದಗಿಸುತ್ತಿದ್ದೇನೆ ಎಂದು ತಿಳಿಸಿದರು. ಇದೇ ವೇಳೆ ಕೊರೊನಾ ಸೋಂಕಿತರಿಗೆ ನೀಡುವ ಸುಮಾರು 50 ಸಾವಿರಕ್ಕೂ ಹೆಚ್ಚು ಹಣದ ಹೋಂ ಐಸೋಲೇಷನ್ ಕಿಟ್ ಆಸ್ಪತ್ರೆಗೆ ನೀಡಲಾಯಿತು.

ಕೊರೊನಾ ನಿಗ್ರಹಕ್ಕೆ ವ್ಯಾಕ್ಸಿನೇಷನ್ ಅತ್ಯವಶ್ಯಕ: ಕೊರೊನಾ ಸೋಂಕಿಗೆ ತುತ್ತಾಗದಿರಲು ವ್ಯಾಕ್ಸಿನೇಷನ್ ಪಡೆದುಕೊಳ್ಳುವುದು ಅತ್ಯವಶ್ಯಕವಾಗಿದೆ. ಸದ್ಯ ವ್ಯಾಕ್ಸಿನೇಷನ್ ಕೊರತೆ ಇದೆ. ಸರ್ಕಾರ ಸಮರ್ಪಕವಾಗಿ ಲಸಿಕೆಯನ್ನು ಜನರಿಗೆ ಒದಗಿಸಬೇಕು. ವೈದ್ಯರು, ಪತ್ರಕರ್ತರು, ಯುವಕರು ಕೊರೊನಾದಿಂದ ಪ್ರಾಣ ಬಿಟ್ಟಿದ್ದಾರೆ. ನಿರ್ಲಕ್ಷ್ಯ ವಹಿಸದೆ ಸ್ವ ಸುರಕ್ಷತೆಯನ್ನು ಪ್ರತಿಯೊಬ್ಬರು‌ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಸಂತ್ರಸ್ತ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು:

ಸುಳ್ವಾಡಿ ದುರಂತದ ನಂತರ ಆಕ್ಸಿಜನ್ ಲಭ್ಯತೆ ಇಲ್ಲದೆ ಜನರು ಪ್ರಾಣ ಬಿಟ್ಟ ಘಟನೆ ತೀವ್ರ ‌ನೋವುಂಟು ಮಾಡಿದೆ. ಮೇ. 2ರಂದು ನಡೆದ ಪ್ರಾಣವಾಯು ದುರಂತಕ್ಕೂ ಮುನ್ನವೇ ಈ ರೀತಿ ಘಟನೆ ಸಂಭವಿಸಬಹುದು ಎಂದು ಎಚ್ಚರಿಸಲಾಗಿತ್ತು. ಆದರೆ ಸರ್ಕಾರ ಮುಂಜಾಗ್ರತೆ ತೆಗೆದುಕೊಳ್ಳದಿದ್ದರಿಂದ 36 ಮಂದಿ ಪ್ರಾಣ ಬಿಟ್ಟಿದ್ದಾರೆ. ವೈದ್ಯರೇ ಆಗಲಿ, ಮತ್ತೊಬ್ಬರಾಗಲಿ ಈ ಘಟನೆಗೆ ಕಾರಣವಲ್ಲ. ಸರ್ಕಾರವೇ ಇದಕ್ಕೆ ಕಾರಣ ಎಂದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ತಗ್ಗಿದ ಕೊರೊನಾ: 8,696 ಸೋಂಕಿತರು ಪತ್ತೆ!

ಈಗಾಗಲೇ ಪ್ರಕರಣದ ತನಿಖೆಯ ರಿಪೋರ್ಟ್ ನ್ಯಾಯಾಲಯಕ್ಕೆ ತಲುಪಿದೆ. ಸದ್ಯ ನ್ಯಾಯಾಲಯದ ಹಂತದಲ್ಲಿ ವಿಚಾರಣೆ ನಡೆಯುತ್ತಿದೆ. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗಬೇಕು. ಸಾವನ್ನಪ್ಪಿದವರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಹಣ ನೀಡಬೇಕು ಎಂದು ಒತ್ತಾಯಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.