ಚಾಮರಾಜನಗರ: ರಾಜ್ಯದ ಪ್ರಮುಖ ಯಾತ್ರಾಸ್ಥಳವಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಆಷಾಢ ಮಾಸದಲ್ಲೂ ಮಾದಪ್ಪ ಕೋಟಿ ಒಡೆಯನಾಗಿದ್ದಾನೆ.
ಸಾಲೂರು ಮಠದ ಹಿರಿಯ ಸ್ವಾಮೀಜಿ ಹಾಗೂ ಮಲೆಮಹದೇಶ್ವರ ಬೆಟ್ಟ ಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಸಮ್ಮುಖದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, 1,25,50,612 ರೂ. ಹಣ ಮತ್ತು 28 ಗ್ರಾಂ ಚಿನ್ನ , 1.3 ಕೆಜಿ ಬೆಳ್ಳಿ ರೂಪದಲ್ಲಿ ಭಕ್ತರು ಕಾಣಿಕೆ ನೀಡಿದ್ದಾರೆ.
ಬೆಟ್ಟಕ್ಕೆ ಸಾಕಷ್ಟು ಹಣ ಹರಿದುಬಂದರೂ ಸಮರ್ಪಕ ಮೂಲಸೌಕರ್ಯ ಭಕ್ತಾದಿಗಳಿಗೆ ಸಿಗುತ್ತಿಲ್ಲ ಎಂಬ ಅಳಲು ಸ್ಥಳೀಯರದ್ದಾಗಿದೆ.