ಚಾಮರಾಜನಗರ : ಲಾಡು ಜೊತೆ ಹಣದ ಬ್ಯಾಗನ್ನು ಕೊಟ್ಟು ತೀವ್ರ ಚರ್ಚೆಗೆ ಕಾರಣವಾಗಿದ್ದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಪ್ರಕರಣ ಸುಖಾಂತ್ಯ ಕಂಡಿದೆ. ಹಣ ಮತ್ತೆ ಪ್ರಾಧಿಕಾರದ ಬೊಕ್ಕಸ ಸೇರಿದೆ. ನರಸಿಂಹ ಎಂಬ ಬೆಂಗಳೂರು ಮೂಲದ ವ್ಯಕ್ತಿ ಮಾದಪ್ಪನ ಹಣವನ್ನು ತಂದು ವಾಪಸ್ ನೀಡಿದ್ದಾರೆ.
ಗುರುವಾರ ಭೀಮನ ಅಮಾವಾಸ್ಯೆ ಆದದ್ದರಿಂದ ಭಕ್ತರ ದಂಡೇ ಹರಿದುಬಂದಿತ್ತು. ಈ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರರೊಬ್ಬರು ಭಕ್ತರಿಗೆ ವಿಶೇಷ ದರದ ಟಿಕೆಟ್ ನೀಡಿ ಲಾಡು ಪ್ರಸಾದದ ಜೊತೆ 2.91 ಲಕ್ಷ ಹಣವನ್ನು ಕೊಟ್ಟಿದ್ದರು. ಹಣ ಕಳೆದಿದ್ದ ಸಂಬಂಧ ಮಲೆಮಹದೇಶ್ವರ ಬೆಟ್ಟ ಪೊಲೀಸರಿಗೆ ದೂರು ಕೊಡಲಾಗಿತ್ತು. ಜೊತೆಗೆ, ನಷ್ಟವಾದ ಹಣವನ್ನು ನೌಕರನೇ ತುಂಬುವಂತೆ ಪ್ರಾಧಿಕಾರದ ಅಧಿಕಾರಿಗಳು ತಾಕೀತು ಮಾಡಿದ್ದರು.
ಕಣ್ತಪ್ಪಿನಿಂದ ಆಗಿದ್ದರಿಂದ ಯಾವುದೇ ಪ್ರಕರಣ ದಾಖಲಿಸಿಕೊಳ್ಳದೇ ಕಾರ್ಯಾಚರಣೆ ಕೈಗೊಂಡ ಪೊಲೀಸರು ಸಿಸಿಟಿವಿ ಮೂಲಕ ಗುರುತು ಪತ್ತೆಹಚ್ಚಿ ಭಕ್ತನನ್ನು ಸಂಪರ್ಕಿಸಿ ಹಣವನ್ನು ವಾಪಸ್ ಮಾಡಿಸಿದ್ದಾರೆ. ಸದ್ಯ, ಲಾಡು ಜೊತೆ ಹೋಗಿದ್ದ ದುಡ್ಡು ವಾಪಸ್ ಆಗಿದೆ.
ಇದನ್ನೂ ಓದಿ : ಮಲೆಮಹದೇಶ್ವರ ಬೆಟ್ಟದಲ್ಲಿ ಎಡವಟ್ಟು: ಲಡ್ಡು ಜೊತೆ ಭಕ್ತನ ಕೈಸೇರಿದ ₹2.9 ಲಕ್ಷ ದುಡ್ಡು