ಚಾಮರಾಜನಗರ : ಶಿವಮೊಗ್ಗ ಬ್ಲಾಸ್ಟ್ ಪ್ರಕರಣದ ಬಳಿಕ ಎಚ್ಚೆತ್ತ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕಲ್ಲುಗಣಿ ಗುತ್ತಿಗೆ ಮಂಜೂರಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಕ್ರಮ ಬಯಲಿಗೆಳೆದಿದ್ದಾರೆ.
ಹನೂರು ತಾಲೂಕಿನ ಚಂದಗಾರನಹಳ್ಳಿ ಗ್ರಾಮದ ಸರ್ವೆ ನಂ. 148ರಲ್ಲಿ ನಿರ್ಮಾಣ ಮಾಡಿರುವ ಕ್ರಷರ್ ಘಟಕ ಪರಿಶೀಲಿಸಿದ ವೇಳೆ ಯಾವುದೇ ಅನುಮತಿ ಪಡೆಯದೇ ಕ್ರಷರ್ ಘಟಕ ಸ್ಥಾಪಿಸಿದ್ದು, ಕ್ರಷರ್ ಘಟಕದ ಪಕ್ಕದಲ್ಲಿ ಸುಮಾರು 800 ಮೆ.ಟನ್‍ನಷ್ಟು ಕಟ್ಟಡ ಕಲ್ಲು (2mm) ದಾಸ್ತಾನಿರಿಸಿದ್ದು ಬೆಳಕಿಗೆ ಬಂದಿದೆ. ಈ ಕ್ರಷರ್ನ ಜಪ್ತಿ ಮಾಡಿ ಸಂಬಂಧಿಸಿದ ಪಟ್ಟಾದಾರರಿಗೆ ಗಣಿ ಇಲಾಖೆ ಡಿಡಿ ನೋಟಿಸ್ ಜಾರಿಗೊಳಿಸಿದ್ದಾರೆ.
ಇನ್ನು, ಬೈರನತ್ತ ಗ್ರಾಮದ ಸರ್ವೇ ನಂ.90ರ ಸಮೀಪ ಟಾರ್‍ಮಿಕ್ಸಿಂಗ್ ಪ್ಲಾಂಟ್‍ನ್ನು ಸ್ಥಾಪಿಸಿದ್ದು, ಸುಮಾರು 150 ಟನ್ ಜಲ್ಲಿ ಚಿಪ್ಸ್‌ನ ದಾಸ್ತಾನು ಮಾಡಲಾಗಿದೆ. ಟಾರ್ ಮಿಕ್ಸಿಂಗ್‍ಗೆ ಬಳಸುತ್ತಿರುವುದು ಪರಿಶೀಲನೆ ವೇಳೆ ಕಂಡು ಬಂದಿತು.
ಸ್ಥಳದಲ್ಲಿ ಟಾರ್ ಮಿಕ್ಸಿಂಗ್ ಘಟಕಕ್ಕೆ ತಂತಿ ಸುತ್ತಿ ಸೀಲ್ ಮಾಡಿ ಘಟಕವು ಕಾರ್ಯ ನಿರ್ವಹಿಸದಂತೆ ಮಾಡಿ ಜಮೀನು ಮಾಲೀಕರ ವಿವರ ಪತ್ತೆ ಹಚ್ಚಿ ನೋಟಿಸ್ ಜಾರಿಗೊಳಿಸಲು ಹನೂರಿನ ತಹಶೀಲ್ದಾರ್ ಅವರಿಗೆ ಡಿಡಿ ಕೋರಿದ್ದಾರೆ.
ಓದಿ-ಬೆಂಬಲಿಗರ ಮೇಲೆ ಲಾಠಿ ಚಾರ್ಜ್ ಖಂಡಿಸಿ ಠಾಣೆಗೆ ಮುತ್ತಿಗೆ ಹಾಕಿದ ಶಾಸಕ ಶರತ್ ಬಚ್ಚೇಗೌಡ
ಚಾಮರಾಜನಗರ-ಗುಂಡ್ಲುಪೇಟೆ ಮುಖ್ಯ ರಸ್ತೆ ಬಳಿ ಅನಧಿಕೃತವಾಗಿ ಕಟ್ಟಡ ಕಲ್ಲು ಸಾಗಾಣಿಕೆ ಮಾಡುತ್ತಿದ್ದ ಎರಡು ಲಾರಿಗಳನ್ನು ಪತ್ತೆ ಹಚ್ಚಿ (ಕೆಎಲ್-52 ಹೆಚ್-7338 ಮತ್ತು ಕೆಎಲ್-53 ಕೆ-7099) ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಅನಧಿಕೃತ ಸ್ಪೋಟಕ ಸಾಗಾಣಿಕೆ ದಾಸ್ತಾನು ಬಳಕೆ ಸಂಬಂಧ ಉಲ್ಲಂಘನೆಗಳು ಕಂಡು ಬಂದಲ್ಲಿ ಪೊಲೀಸ್ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಎಲ್ಲಾ ಗುತ್ತಿಗೆದಾರರಿಗೆ ಈಗಾಗಲೇ ಸೂಚಿಸಲಾಗಿದ್ದು, ಸ್ಫೋಟಕ ಬಳಕೆ ಕಾರ್ಮಿಕರ ಸುರಕ್ಷತೆಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆಯೂ ಅಧಿಕಾರಿಗಳು ನಿಗಾ ಇಟ್ಟಿದ್ದಾರೆ.