ಚಾಮರಾಜನಗರ: ವರನಟ ಡಾ.ರಾಜ್ಕುಮಾರ್ ಅವರ ತವರಾದ ಹನೂರು ಕ್ಷೇತ್ರ ವ್ಯಾಪ್ತಿ ಸಿಂಗಾನಲ್ಲೂರಿನಲ್ಲಿ 60ಕ್ಕೂ ಹೆಚ್ಚು ಮಂದಿ ಚಿಕೂನ್ ಗುನ್ಯಾ, ಡೆಂಗ್ಯೂನಿಂದ ಬಳಲುತ್ತಿದ್ದಾರೆ.
ಗ್ರಾಮದಲ್ಲಿ ತಿಂಗಳಿನಿಂದ ಡೆಂಗ್ಯೂ, ಚಿಕೂನ್ ಗುನ್ಯಾ ಜ್ವರ ಹಲವಾರು ಮಂದಿಗೆ ಕಾಣಿಸಿಕೊಂಡಿದೆ. ದಿನನಿತ್ಯ ಜನರು ಆಸ್ವತ್ರೆಗೆ ಅಲೆದಾಡುತ್ತಿದ್ದಾರೆ.
ಅಷ್ಟೇ ಅಲ್ಲದೇ, ಇಂದು ಗ್ರಾಪಂ ಅಧ್ಯಕ್ಷರ ಮಗ ಸಾಗರ್ (30) ಎಂಬಾತನೇ ಡೆಂಗ್ಯೂ ವ್ಯಾದಿಗೆ ಬಲಿಯಾಗಿದ್ದಾನೆ. ಗ್ರಾಮದಲ್ಲಿ ತಾಂಡವವಾಡುವ ಅನೈರ್ಮಲ್ಯ, ಹೆಚ್ಚುತ್ತಿರುವ ಸೊಳ್ಳೆಗಳೇ ರೋಗದ ಮೂಲವಾಗಿವೆ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.
ಚೇತರಿಕೆ ಕಾಣದೇ ಗ್ರಾಮಸ್ಥರೆಲ್ಲರೂ ಒದ್ದಾಡುತ್ತಿದ್ದರೂ, ಈವರೆಗೂ ಸ್ಥಳಿಯ ಶಾಸಕ ಆರ್.ನರೇಂದ್ರ ಅಥವಾ ತಾಲೂಕು ಆಡಳಿತ ಅಧಿಕಾರಿಗಳು ಇತ್ತ ಕಾಲಿಟ್ಟಿಲ್ಲ ಎಂದು ಆರೋಪಿಸಿದ್ದಾರೆ.