ಚಾಮರಾಜನಗರ: ತನ್ನ ಸ್ನೇಹಿತರೊಂದಿಗೆ ಈಜಲು ಹೋಗಿದ್ದ ಯುವಕನೊಬ್ಬ ಗುಂಡಾಪುರ ಜಲಾಶಯದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಹನೂರು ಪಟ್ಟಣದ ಜಯಂತ್(18) ಮೃತ ಯುವಕ.
ಈತ ಖಾಸಗಿಯಾಗಿ ಎಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದ್ದು, ಇಂದು ಭಾನುವಾರವಾದ್ದರಿಂದ ಸ್ನೇಹಿತರ ಗುಂಪಿನೊಂದಿಗೆ ಗುಂಡಾಪುರದ ಉಡುತೊರೆ ಜಲಾಶಯಕ್ಕೆ ತೆರಳಿದ್ದ ಎಂದು ಹೆಳಲಾಗಿದೆ.
ಜಯಂತ್ ನೀರಿನಲ್ಲಿ ನಾಪತ್ತೆಯಾಗಿರುವುದನ್ನು ಅರಿತ ಸ್ನೇಹಿತರು ನೀರಿನಲ್ಲಿ ಕೆಲ ಕಾಲ ಈಜಿ ಹುಡುಕಾಟ ನಡೆಸಿದ್ದಾರೆ. ಬಳಿಕ ಸಿಗದಿದ್ದಾಗ ಆತಂಕಗೊಂಡು ಸ್ಥಳೀಯರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸದ್ಯ, ಅಗ್ನಿಶಾಮಕ ಸಿಬ್ಬಂದಿ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.
ಇದನ್ನೂ ಓದಿ: ಈದ್-ಅಲ್-ಫಿತರ್ 2022: ಕಾಣದ ಚಂದ್ರ, ಮೇ 3 ರಂದು ರಂಜಾನ್ ಆಚರಣೆಗೆ ನಿರ್ಧಾರ