ಚಾಮರಾಜನಗರ: ಕಾದಾಟದಲ್ಲಿ ಮೃತಪಟ್ಟ ಹುಲಿಯ ಕಳೇಬರ ಗುಂಡ್ಲುಪೇಟೆ ತಾಲೂಕಿನ ಬರಗಿ ಸಮೀಪದ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಮೃತಪಟ್ಟಿರುವುದು ಗಂಡು ಹುಲಿಯಾಗಿದ್ದು, 6 ರಿಂದ 7 ವರ್ಷ ವಯಸ್ಸಿನದು ಇರಬಹುದೆಂದು ಅಂದಾಜಿಸಲಾಗಿದೆ. ಮೃತಪಟ್ಟಿರುವ ಹುಲಿಯ ಎಲ್ಲಾ ಉಗುರು, ಹಲ್ಲುಗಳು ಸುರಕ್ಷಿತವಾಗಿದ್ದು, ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಹುಲಿಯ ಕಳೇಬರ ಸಿಕ್ಕ ಪ್ರದೇಶವು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ವನ್ಯಜೀವಿ ವಲಯದ ಅರದೇವನಕಟ್ಟೆ ಪ್ರದೇಶಕ್ಕೆ ಒಳಪಟ್ಟಿದ್ದು, ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದರು. ಬಳಿಕ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿಯಂತೆ ಹುಲಿಯ ದೇಹವನ್ನು ಅಂತ್ಯಕ್ರಿಯೆ ಮಾಡಲಾಗಿದೆ.
ಓದಿ : ರಾಮನ ಬಾಣಕ್ಕೆ ಎರಡು ಹೋಳಾದ ಬೆಟ್ಟ: ಇಲ್ಲಿ ಶ್ರೀರಾಮನ ಹೆಜ್ಜೆ ಗುರುತಿಗೆ ನಿತ್ಯ ಪೂಜೆ