ಕೊಳ್ಳೇಗಾಲ: ಸತ್ತೇಗಾಲ ಹ್ಯಾಂಡ್ ಪೋಸ್ಟ್ ಸಮೀಪದ ಕಾವೇರಿ ನದಿ ತೀರದಲ್ಲಿ ಸತ್ತ ಮೊಸಳೆಯ ಕಳೇಬರ ಪತ್ತೆಯಾಗಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಕೊಳ್ಳೇಗಾಲ ಬಫರ್ ಉಪ ಅರಣ್ಯಾಧಿಕಾರಿ ಪ್ರಮೋದ್ ಹಾಗೂ ಆರ್‌ಎಫ್‌ಒ ಪ್ರವೀಣ್ ಚಲವಾದಿ ನದಿ ಮಧ್ಯದಲ್ಲಿ ತೇಲುತ್ತಿದ್ದ ಮೊಸಳೆ ಕಳೇಬರವನ್ನು ದಡಕ್ಕೆ ತಂದು ಪರಿಶೀಲನೆ ನಡೆಸಿದರು.
ದೇಹ ಕೊಳೆತ ಸ್ಥಿತಿಯಲ್ಲಿ ಇದ್ದುದರಿಂದ ಸ್ಥಳದಲ್ಲೇ ಪಶುವೈದ್ಯ ಶಿವಕುಮಾರ್ ಮರಣೋತ್ತರ ಪರೀಕ್ಷೆ ನಡೆಸಿದರು. ಸುಮಾರು 5-6 ವರ್ಷದ ಮೊಸಳೆಯಾಗಿದ್ದು, ಸ್ವಾಭಾವಿಕವಾಗಿ ಮೃತಪಟ್ಟಿದೆ ಎಂದು ಡಿಎಫ್ಒ ವಿ.ಏಡುಕುಂಡಲು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.