ಕೊಳ್ಳೇಗಾಲ: ಪಟ್ಟಣದ ಸರ್ಕಾರಿ ಆಸ್ಪತ್ರೆಯ ಎದುರಿರುವ ಇಂದಿರಾ ಕ್ಯಾಂಟೀನ್ಗೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಎಂ.ಆರ್.ರವಿ ಕ್ಯಾಂಟೀನ್ನಲ್ಲಿಯೇ ಸಿದ್ಧಪಡಿಸಿದ್ದ ಊಟ ಸವಿದರು.
ಅಧಿಕಾರಿಗಳೊಂದಿಗೆ ಕ್ಯಾಂಟೀನ್ ಪರಿಶೀಲಿಸಿದ ಡಿಸಿ ಸ್ವಚ್ಛತೆ ಹಾಗೂ ಆಹಾರದ ಗುಣಮಟ್ಟ ಕಾಪಾಡಿಕೊಳ್ಳಬೇಕು ಎಂದು ಸೂಚಿಸಿದರು. ಉಪವಿಭಾಗಧಿಕಾರಿ ದಿಲೀಪ್ ಗಿರೀಶ್ ಬದೋಲೆ, ತಹಶೀಲ್ದಾರ್ ಕುನಾಲ್ ಹಾಗೂ ಪೌರಯುಕ್ತ ವಿಜಯ್ ಜೊತೆ ಜಿಲ್ಲಾಧಿಕಾರಿಗಳು ಅನ್ನ, ಸಾಂಬರ್, ಮೊಸರನ್ನು ಸವಿದರು.