ETV Bharat / state

'ರೋಡಲ್ಲಿ ಏನ್​ ಆಟ ಆಡ್ತಿದೀರಾ...?' ವಾಹನ ಚೇಸ್ ಮಾಡ್ತಿದ್ದ ಫ್ಯಾನ್ಸ್​ಗೆ ದರ್ಶನ್ ತರಾಟೆ - chamarajanagara latest news

ಮೂವರು ಬೈಕ್ ಸವಾರರು ಒಡೆಯರಪಾಳ್ಯ ರಸ್ತೆಯಲ್ಲಿ ಹೋಗುತ್ತಿದ್ದಾಗ ಅಚಾನಕ್ಕಾಗಿ ನಟ ದರ್ಶನ್​ ಕೂಡ ಅದೇ ರಸ್ತೆಯಲ್ಲಿ ತೆರಳುತ್ತಿದ್ದರು. ಈ ವೇಳೆ ಅಭಿಮಾನಿಗಳು ಬೈಕ್​ನಲ್ಲಿ ನಟನನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ.

darshan-outrage-against-his-fans-who-overtake-the-vehicle
ಚೇಸ್ ಮಾಡುತ್ತಿದ್ದ ಫ್ಯಾನ್ಸ್​ಗೆ ಡಿಬಾಸ್ ಕ್ಲಾಸ್!
author img

By

Published : Oct 19, 2021, 8:26 AM IST

ಚಾಮರಾಜನಗರ: ದರ್ಶನ್ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿರುವ ನಟ. ಅಭಿಮಾನಿಗಳು ತಪ್ಪೆಸಗಿದಾಗ ಅವರನ್ನು ತಿದ್ದುವ ಕೆಲಸವನ್ನೂ ಅವರು ಮಾಡುತ್ತಿರುತ್ತಾರೆ. ಇದಕ್ಕೊಂದು ಉದಾಹರಣೆ ಭಾನುವಾರ ನಡೆದ ಘಟನೆ.

ಮೂವರು ಬೈಕ್ ಸವಾರರು ಒಡೆಯರಪಾಳ್ಯ ರಸ್ತೆಯಲ್ಲಿ ತೆರಳುವಾಗ ಅಚಾನಕ್ಕಾಗಿ ದರ್ಶನ್​ ಕೂಡ ಅದೇ ರಸ್ತೆಯಲ್ಲಿ ಬಂದಿದ್ದಾರೆ. ಈ ವೇಳೆ ಬೈಕ್​ನಲ್ಲಿ ನಟನನ್ನು ಹಿಂಬಾಲಿಸಿಕೊಂಡು ಬಂದಿರುವ ಅಭಿಮಾನಿಗಳು ವೇಗದಲ್ಲಿ ಬೈಕ್ ಸವಾರಿ ಮಾಡಿಕೊಂಡು ಬರುತ್ತಿದ್ದರು. ಅಷ್ಟೇ ಅಲ್ಲದೇ, ವಾಹನ ಚಲಿಸುತ್ತಿರುವಾಗಲೇ ನೆಚ್ಚಿನ ನಟನ ವಿಡಿಯೋ ಮಾಡಲು ಮುಂದಾಗಿದ್ದಾರೆ.

ವಾಹನ ಚೇಸ್ ಮಾಡುತ್ತಿದ್ದ ಫ್ಯಾನ್ಸ್​ಗೆ ನಟ ದರ್ಶನ ಕ್ಲಾಸ್

ಇದನ್ನು ಗಮನಿಸಿದ ದರ್ಶನ್, "ಏ.. ರೋಡಲ್ಲಿ ಏನ್ ಆಟ ಆಡ್ತಾ ಇದೀರಾ, ಮೈಮೇಲೆ ಪ್ರಜ್ಞೆ ಬೇಡವಾ, ಮತ್ತೆ ಮತ್ತೆ ಬರ್ತಾ ಇದೀರಲ್ಲಾ, ಹೇಳಿದ್ರೂ ಕೇಳಲ್ವಾ?" ಎಂದು ಕ್ಲಾಸ್ ತೆಗೆದುಕೊಂಡರು. ಇವೆಲ್ಲವೂ ಬೈಕ್‌ ಹಿಂಬದಿ ಸವಾರ ಮಾಡಿರುವ ವಿಡಿಯೋದಲ್ಲಿ ರೆಕಾರ್ಡ್​ ಆಗಿದೆ. ಈ ವೇಳೆ ದರ್ಶನ್ ಪತ್ನಿ ಕೂಡ ವಾಹನದಲ್ಲಿ ಇದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.