ಚಾಮರಾಜನಗರ: ಜಿಲ್ಲೆಯ ಹುಲಿ ಸಂರಕ್ಷಿತ ಪ್ರದೇಶದ ಕಾಡಿನಲ್ಲಿರುವ ಬಿಳಿಗಿರಿರಂಗನಾಥ ಸ್ವಾಮಿ ದೇಗುಲದ ಹಾದಿಯ ಬಳಿ ಕಾರು ನಿಲ್ಲಿಸಿ ಶಾಸಕ ಮಹೇಶ್ ಬೆಂಬಲಿಗರು ಡ್ಯಾನ್ಸ್ ಮಾಡಿರುವ ವಿಡಿಯೋವೊಂದು ವೈರಲ್ ಆಗಿದ್ದು, ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರವೇಶದ್ವಾರದಿಂದ ಗಿರಿಜನರ ಪೋಡಿಯವರೆಗೆ ಎಲ್ಲಿಯೂ ಪ್ರವಾಸಿಗರು ವಾಹನ ನಿಲ್ಲಿಸುವಂತಿಲ್ಲ, ಒಂದು ವೇಳೆ ನಿಲ್ಲಿಸಿದರೂ, ದಂಡ ವಿಧಿಸುವ ಅರಣ್ಯ ಇಲಾಖೆಯ ಕಣ್ಣಿಗೆ ಮಹೇಶ್ ಉಪ್ಪಾರ್, ಜಿ.ಮಾದೇಶ್, ಕೆ.ದೊರೆಸ್ವಾಮಿ, ಪಿ.ಕುಮಾರ್ ಹಾಗೂ ಇನ್ನಿತರರು ಕಣ್ಣಿಗೆ ಬಿದ್ದಿಲ್ಲವೇ ಎಂಬ ವಿಚಾರ ಈಗ ಚರ್ಚಾಸ್ಪದವಾಗಿದೆ.
ರಸ್ತೆಬದಿಯಲ್ಲೇ ವಾಹನ ನಿಲ್ಲಿಸಿ ಹಾಡುಗಳನ್ನು ಹಾಕಿಕೊಂಡು 4-5 ಮಂದಿ ಕುಣಿದಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಇನ್ನಾದರೂ ಅರಣ್ಯ ಇಲಾಖೆ ಸೂಕ್ತ ಗಸ್ತು ಮಾಡಬೇಕಿದ್ದು, ಡ್ಯಾನ್ಸ್ ಮಾಡಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಕೂಗು ಜೋರಾಗಿದೆ.