ಚಾಮರಾಜನಗರ: ಎರಡನೇ ದಿನದ ಕೊರೊನಾ ಕರ್ಫ್ಯೂ ನಡುವೆ ಅಗತ್ಯ ವಸ್ತುಗಳನ್ನು ಖರೀದಿಸಲು ನಗರದ ಮಾರುಕಟ್ಟೆಗಳಲ್ಲಿ ಜನಜಾತ್ರೆಯೇ ನೆರೆದಿತ್ತು. ಇದನ್ನು ನೋಡಿದ ಅಧಿಕಾರಿಗಳು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಜನರಿಗೆ ಕೈ ಮುಗಿದು ಬೇಡಿಕೊಂಡರು.
ಅಂಗಡಿ ಮುಂಗಟ್ಟು, ತರಕಾರಿ ಮಾರುಕಟ್ಟೆಗಳಲ್ಲಿ ಜನ ಖರೀದಿಗೆ ಮುಗಿ ಬಿದ್ದಿದ್ದರು. ಈ ವೇಳೆ ನಗರಸಭೆ ಯೋಜನಾ ನಿರ್ದೇಶಕ ಕೆ. ಸುರೇಶ್, ಆರೋಗ್ಯ ನಿರೀಕ್ಷಕ ಶರವಣ, ಸುರಕ್ಷ ತಂಡದೊಂದಿಗೆ ಫೀಲ್ಡಿಗಿಳಿದು ಜನರಿಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಮನವಿ ಮಾಡಿದರು.
ಇದನ್ನೂ ಓದಿ : ಹೆಂಡತಿಯ ಐಡಿ ಕಾರ್ಡ್ ದುರುಪಯೋಗ: ಪತಿ ಮಹಾಶಯನ ಮೈ ಚಳಿ ಬಿಡಿಸಿದ ಪೊಲೀಸ್ ಆಯುಕ್ತ!
ಇಂದು ನಿಮ್ಮೊಂದಿಗೆ ಕೈ ಮುಗಿದು ಮನವಿ ಮಾಡಿಕೊಳ್ಳುತ್ತಿದ್ದೇವೆ. ನಾಳೆಯಿಂದ ಈ ರೀತಿ ನಿರ್ಲಕ್ಷ್ಯ ತೋರಿದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಪಿ.ಡಿ ಸುರೇಶ್ ಜನರಿಗೆ ಎಚ್ಚರಿ ನೀಡಿದರು.