ಕೊಳ್ಳೇಗಾಲ: ಕಳೆದ 35 ವರ್ಷಗಳಿಂದಲೂ ಭೂಸ್ವಾಧೀನ ಪ್ರಕರಣದಲ್ಲಿ ರೈತರಿಗೆ ಪರಿಹಾರ ನೀಡದೆ ಸತಾಯಿಸುತ್ತಿದ್ದ ಉಪವವಿಭಾಗಾಧಿಕಾರಿಗಳ ಕ್ರಮಕ್ಕೆ ಕೊಳ್ಳೇಗಾಲ ಸಿವಿಲ್ ಕೋರ್ಟ್ ಗರಂ ಆಗಿದ್ದು, ಪರಿಹಾರ ನೀಡದೆ ಸತಾಯಿಸಿದ ಹಿನ್ನೆಲೆ ಕೊಳ್ಳೇಗಾಲದ ಉಪವಿಭಾಧಿಕಾರಿಗಳ ಚರಾಸ್ತಿ ಮತ್ತು ಚಿರಾಸ್ತಿಗಳನ್ನು ಜಪ್ತಿ ಮಾಡುವಂತೆ ಸಿವಿಲ್ ನ್ಯಾಯಾಧೀಶರಾದ ಆನಂದ್ ಅವರು ನೋಟಿಸ್ ಜಾರಿಗೊಳಿಸಿದ್ದಾರೆ.
ಕುಂತೂರು ಗ್ರಾಮ ಸಮೀಪದ ಮೋಳೆಯ ಸುಬ್ಬಲಕ್ಷ್ಮಮ್ಮ ಎಂಬುವರ ಜಮೀನನ್ನು 1985ರಲ್ಲಿ ಸರ್ಕಾರ ಇವರ ನಿವೇಶನ ಹಂಚಿಕೆಗಾಗಿ ಭೂಸ್ವಾಧೀನ ಪಡಿಸಿಕೊಳ್ಳಲಾಗಿತ್ತು, 2004ರಲ್ಲಿ ನಿವೇಶನ ಹಂಚಿಕೆ ಪ್ರಕ್ರಿಯೆಯೂ ಪೂರ್ಣಗೊಂಡಿತ್ತು. ಆಗಿದ್ದರೂ ಸಹಾ ಅವರಿಗೆ ಉಪವಿಭಾಗಾಧಿಕಾರಿಗಳು ಪರಿಹಾರ ನೀಡಿರಲಿಲ್ಲ, ಸರ್ಕಾರಕ್ಕೂ ಪತ್ರ ಬರೆದು ಮನವಿ ಸಲ್ಲಿಸಿ ಬೇಸತ್ತಿದ್ದ ಸುಬ್ಬಮ್ಮ ಅವರು 2018ರಲ್ಲಿ ಸಿವಿಲ್ ನ್ಯಾಯಾಲಯದಲ್ಲಿ ವಕೀಲ ಕೆಂಪರಾಜು ಅವರ ಮಾರ್ಗದರ್ಶನದಲ್ಲಿ ದಾವೆ ಹೂಡಿದ್ದರು.
ಇಂದು ವಾದ, ವಿವಾದ ಆಲಿಸಿದ ನ್ಯಾಯಾಧೀಶರಾದ ಆನಂದ್ ಅವರು ಉಪವಿಭಾಗಾಧಿಕಾರಿಗಳು ಮತ್ತು ಸರ್ಕಾರದ ನಡೆ ವಿರುದ್ಧ ಕಲಾಪದ ವೇಳೆ ಗರಂ ಆದರಲ್ಲದೆ ಪರಿಹಾರಕ್ಕೆ ಸತಾಯಿಸಿದ ಹಿನ್ನೆಲೆ ಅಧಿಕಾರಿಯ ಚರಾಸ್ತಿ ಮತ್ತು ಚಿರಾಸ್ತಿಯನ್ನು ವಶಕ್ಕೆ ಪಡೆಯುವಂತೆ ನೋಟಿಸ್ ಜಾರಿಗೊಳಿಸಿ ಆದೇಶ ನೀಡಿದ್ದಾರೆ.
ನ್ಯಾಯಾಲಯ ಆದೇಶದ ಹಿನ್ನೆಲೆ ವಕೀಲ ಕೆಂಪರಾಜು ಅವರು ದೂರುದಾರರು ಹಾಗೂ ಗಣ್ಯರ ಸಮ್ಮುಖದಲ್ಲಿ ಉಪವಿಭಾಗಾಧಿಕಾರಿಗಳ ಕಚೇರಿಗೆ ನೋಟಿಸ್ ತಲುಪಿಸಲಾಗಿದೆ. ಈವೇಳೆ ಸರ್ಕಾರಿ ಅಭಿಯೋಜಕರು ಡಿಸೆಂಬರ್ 6 ರ ತನಕ ಕಾಲಾವಕಾಶ ಕೋರಿದ್ದಾರೆ ಎನ್ನಲಾಗಿದೆ.