ETV Bharat / state

ಖೋಟಾ ನೋಟು ಜಾಲದ ಶಂಕೆ: 40 ಲಕ್ಷಕ್ಕೆ ಒಂದು ಕೋಟಿ ಆಫರ್​.. ವಂಚನೆ

ಚಾಮರಾಜನಗರದಲ್ಲಿ ಖೋಟಾ ನೋಟು ಹರಿದಾಡುತ್ತಿರುವ ಶಂಕೆ ವ್ಯಕ್ತವಾಗಿದ್ದು, ಹಲವರು ವಂಚಿಸಲ್ಪಟ್ಟಿದ್ದಾರೆ. ಈ ಕುರಿತು ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Fake notes scam in chamarajanagar
ಖೋಟಾ ನೋಟ ಜಾಲದ ಶಂಕೆ: 40 ಲಕ್ಷಕ್ಕೆ ಒಂದು ಕೋಟಿ ಆಫರ್​.. ವಂಚನೆ
author img

By

Published : Feb 12, 2022, 8:00 AM IST

Updated : Feb 12, 2022, 12:30 PM IST

ಕೊಳ್ಳೇಗಾಲ, ಚಾಮರಾಜನಗರ : 40 ಲಕ್ಷ ರೂಪಾಯಿ ಕೊಟ್ಟರೆ, ಅಸಲಿಯನ್ನೇ ಹೋಲುವ 1 ಹಣ ಕೋಟಿ ನೀಡುತ್ತೇವೆ ಎಂದು ನಂಬಿಸಿ ವಂಚಿಸಿರುವ ಘಟನೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ಬೆಂಗಳೂರಿನ ಪಿನಿಕಲ್ ಆಸ್ಪತ್ರೆಯ ಎಂ.ಡಿ ಶಂಕರ್ ಹಾಗೂ ಆತನ ಕಾರು ಚಾಲಕ ರಘು ಎಂಬುವವರು‌ ವಂಚನೆಗೊಳಗದಾವರು. ತೆಳ್ಳನೂರು ಗ್ರಾಮದ ಶಿವು, ಕಣ್ಣೂರಿನ ಮಹೇಶ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿವೃತ್ತ ನೌಕರ ಮತೀನ್, ಈತನ ಸ್ನೇಹಿತ ಮೂಷಾ ಸೇರಿದಂತೆ 9 ಮಂದಿಯ ತಂಡ ವಂಚನೆ ನಡೆಸಿರುವ ಆರೋಪ ಕೇಳಿ ಬಂದಿದೆ.

ಶಂಕರ್ ಅವರ ಕಾರು ಚಾಲಕ ರಘು‌ಗೆ ಶಿವು ಮತ್ತು ಮಹೇಶ್ ಪರಿಚಯವಿದ್ದು 40 ಲಕ್ಷ ರೂಪಾಯಿ ಕೊಟ್ಟರೆ, ಅಸಲಿ ಹಣವನ್ನು ಹೋಲುವ 1 ಕೋಟಿ ಹಣ ನೀಡುತ್ತೇವೆ ಎಂದು ಹೇಳಿ ನಂಬಿಸಿದ್ದರು. 2021ರ ಡಿಸೆಂಬರ್​ 12ರಂದು ಮೂಷಾ ಹಾಗೂ ಮತೀನ್, ರಘುವಿಗೆ 500 ರೂಪಾಯಿಯ 10 ನೋಟುಗಳನ್ನು ನೀಡಿ, ಇದನ್ನು ಖರ್ಚು ಮಾಡಿ ಇದರಿಂದ ಯಾರಿಗೂ ಸಂದೇಹ‌ ಬರುವುದಿಲ್ಲ ಎಂದು ಹೇಳಿದ್ದಾರೆ. ಅದರಂತೆ ಶಂಕರ್ ಮತ್ತು ರಘು ಹಣವನ್ನು ಖರ್ಚು ಮಾಡಿದ್ದು, ಯಾರೊಬ್ಬರಿಗೂ ಸಂದೇಹ ಬಂದಿರುವುದಿಲ್ಲ. ಬಳಿಕ ಡಿಸೆಂಬರ್ 7ರಂದು ಅದೇ ರೀತಿ ಶ್ರೀರಂಗಪಟ್ಟಣಕ್ಕೆ ತೆರಳಿ ಮೂಷಾ ಹಾಗೂ ಮತೀನ್​​ಗೆ 10 ಲಕ್ಷ ನೀಡಿ 50 ಸಾವಿರ ಪಡೆದಿದ್ದಾರೆ.

ಮೊದಲೇ ಒಪ್ಪಂದವಾದಂತೆ ಇನ್ನುಳಿದ 25 ಲಕ್ಷ ರೂಪಾಯಿ ಹಣ 5 ಲಕ್ಷದ ಖಾಲಿ ಚೆಕ್ ಅನ್ನು ಡಿಸೆಂಬರ್ 15ರಂದು ಕೊಳ್ಳೇಗಾಲದ ಗುಂಡೇಗಾಲ ಸಮೀಪ ನೀಡಿದ್ದಾರೆ. ಆದರೆ 1 ಕೋಟಿ ನೀಡದೇ ವಂಚಿಸಿ ಪರಾರಿಯಾಗಿದ್ದಾರೆ. ಡಿಸೆಂಬರ್ 22 ಹಾಗೂ ಜನವರಿ 5ರಂದು ಆರೋಪಿಗಳು ಶಂಕರ್​ಗೆ ಕರೆ‌ ಮಾಡಿ ನಿನ್ನ ಹಣ ನಿನಗೆ ಬರುತ್ತದೆ. ಮೋಸ ಆಗುವುದಿಲ್ಲ. ಈ‌ ವಿಚಾರವನ್ನು ಪೊಲೀಸರಿಗೆ ತಿಳಿಸಿದರೆ ಕೊಲೆ ಮಾಡಲಾಗುವುದು ಎಂದು ಧಮ್ಕಿಹಾಕಿದ್ದಾರೆ.

ಇದನ್ನೂ ಓದಿ: ಕೆಲಸ ಮಾಡ್ತಿದ್ದ ಮನೆಯಲ್ಲೇ ಕಳ್ಳತನ... ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದ ಪೊಲೀಸ್​

ಈ ಹಿನ್ನೆಲೆಯಲ್ಲಿ ಆರೋಪಿಗಳಿಂದ ಮೋಸ ಹೋದ ಶಂಕರ್ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು ಸಬ್ ಇನ್ಸ್​ಪೆಕ್ಟರ್ ಮಂಜುನಾಥ್ ಕ್ರಮ ತೆಗದುಕೊಂಡಿದ್ದಾರೆ.

ಖೋಟಾ ನೋಟು ಜಾಲದ ಶಂಕೆ: ವಂಚನೆಗೊಳಗಾದ ಶಂಕರ್ ಮತ್ತು ರಘುವಿಗೆ , ಶಿವು ಮತ್ತು ಮಹೇಶ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿವೃತ್ತ ನೌಕರ ಮತೀನ್​ಗೆ ಪರಿಚಯವಿದ್ದು 40 ಲಕ್ಷ ಕೊಟ್ಟರೆ 1 ಕೋಟಿ ಅಸಲಿಯನ್ನೇ ನೀಡುತ್ತೇವೆ ಎಂದು ಪದೇ ಪದೇ ಹೇಳಿ ನಂಬಿಸಿದ್ದಾರೆ ಎನ್ನಲಾಗಿದ್ದು. ಈ ಪ್ರಕರಣದ ತೆರೆಯಲ್ಲಿ ನಕಲಿ ನೋಟಿನ ಜಾಲ ಇರುವ ಶಂಕೆ ವ್ಯಕ್ತವಾಗಿದೆ. ಪೊಲೀಸರ ತನಿಖೆಯಲ್ಲಿ ಪ್ರಕರಣ ಸತ್ಯಾಂಶ ಹೊರ ಬೀಳಬೇಕಾಗಿದೆ

Last Updated : Feb 12, 2022, 12:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.