ETV Bharat / state

ಚಾಮರಾಜನಗರದಲ್ಲಿಂದು 13 ಮಕ್ಕಳು ಸೇರಿ 48 ಜನರಿಗೆ ಕೊರೊನಾ ದೃಢ - Chamarajanagar corona death

ಚಾಮರಾಜನಗರ ಜಿಲ್ಲೆಯಲ್ಲಿಂದು 13 ಮಕ್ಕಳು ಸೇರಿ 48 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.

Corona positive for 48 people in Chamarajanagar district
ಚಾಮರಾಜನಗರದಲ್ಲಿಂದು 13 ಮಕ್ಕಳು ಸೇರಿ 48 ಜನರಿಗೆ ಕೊರೊನಾ ದೃಢ
author img

By

Published : Aug 9, 2020, 8:41 PM IST

ಚಾಮರಾಜನಗರ: ಜಿಲ್ಲೆಯಲ್ಲಿಂದು 13 ಮಕ್ಕಳು ಸೇರಿ 48 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 1,151ಕ್ಕೆ ಏರಿಕೆಯಾಗಿದೆ.

ಚಾಮರಾಜನಗರದ 55 ವರ್ಷದ ಮಹಿಳೆ ಹಾಗೂ 48 ವರ್ಷದ ವ್ಯಕ್ತಿ ಒಳರೋಗಿಗಳಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಮೃತಪಟ್ಟಿದ್ದು, ಇವರ ಗಂಟಲುದ್ರವ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ. ಪಿಎಫ್ಐ ಸಂಘಟನೆ ಕಾರ್ಯಕರ್ತರು ಮುಸ್ಲಿಂ ಖಬರ್ ಸ್ಥಾನದಲ್ಲಿ ಮೃತರ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

ಇಂದು 72 ಮಂದಿ ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳಿದ್ದು, 357 ಸಕ್ರಿಯ ಪ್ರಕರಣಗಳಿವೆ. ಇಂದು ಚಾಮರಾಜನಗರ 19, ಕೊಳ್ಳೇಗಾಲ 16, ಗುಂಡ್ಲುಪೇಟೆ 11, ಯಳಂದೂರು ತಾಲೂಕಿಗೆ ಇಬ್ಬರು ಸೇರಿ ಒಟ್ಟು 48 ಮಂದಿಗೆ ಸೋಂಕು ದೃಢಪಟ್ಟಿದೆ.

64 ಮಂದಿಗೆ ಹೋಂ ಐಸೊಲೇಷನ್​:

ಚಾಮರಾಜನಗರ ತಾಲೂಕಿನಲ್ಲಿ 18, ಗುಂಡ್ಲುಪೇಟೆ 23, ಕೊಳ್ಳೇಗಾಲ 15 ಹಾಗೂ ಯಳಂದೂರು ತಾಲೂಕಿನಲ್ಲಿ 8 ಮಂದಿ ಹೋಂ ಐಸೊಲೇಷನ್ ನಿಗಾದಲ್ಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.