ETV Bharat / state

4 ದಿನದ ಅಂತರದಲ್ಲಿ ಕುಟುಂಬದ ಮೂವರು ಸಾವು.. ಕೊರೊನಾಗೆ ತಂದೆ, ಇಬ್ಬರು ಮಕ್ಕಳು ಬಲಿ - death of three family members

ಇಂದು ಚಾಮರಾಜನಗರದ ಕ್ರೀಡಾ ಇಲಾಖೆ ನಿರ್ದೇಶಕ ಚೆಲುವಯ್ಯ ಕೋವಿಡ್​ಗೆ ಬಲಿಯಾಗಿದ್ದು, ಕಳೆದ ಹಲವು ದಿನಗಳಿಂದ ಸೋಂಕಿತರಾಗಿ ಚಿಕಿತ್ಸೆ ಪಡೆಯುತ್ತಿದ್ದರು.‌.

ಮೂವರು ಸಾವು
ಮೂವರು ಸಾವು
author img

By

Published : May 10, 2021, 3:06 PM IST

ಚಾಮರಾಜನಗರ : ಕೊರೊನಾ ಮೃತ್ಯುಕೇಕೆ ಚಾಮರಾಜನಗರದಲ್ಲಿ ಆತಂಕ ಹುಟ್ಟಿಸಿದೆ. ನಾಲ್ಕು ದಿನಗಳ ಅಂತರದಲ್ಲಿ ಒಂದೇ ಕುಟುಂಬದ ಮೂವರು ಬಲಿಯಾಗಿರುವ ಘಟನೆ ತಾಲೂಕಿನ ಅಮಚವಾಡಿ ಗ್ರಾಮದಲ್ಲಿ ನಡೆದಿದೆ.

70 ವರ್ಷದ ತಂದೆ, 50 ವರ್ಷದ ಹಿರಿಮಗ, 45 ವರ್ಷದ ಇನ್ನೋರ್ವ ಪುತ್ರ ನಾಲ್ಕು ದಿನಗಳಲ್ಲಿ ಅಸುನೀಗಿದ್ದಾರೆ. ಕೊರೊನಾ ದೃಢಪಟ್ಟಿದ್ದ ತಂದೆ ಹೋಂ ಐಸೋಲೇಷನ್‌ನಲ್ಲೇ ಇದ್ದು ಪರಿಸ್ಥಿತಿ ಬಿಗಡಾಯಿಸಿ ಶುಕ್ರವಾರ ಅಸುನೀಗಿದ್ದರು‌.

ಇದಾದ ಬಳಿಕ ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 50 ವರ್ಷದ ಹಿರಿಮಗ ಕೂಡ ಶನಿವಾರ ಮೃತಪಟ್ಟಿದ್ದರು. ಇಂದು ಮೈಸೂರಿನ ಆಸ್ಪತ್ರೆಯಲ್ಲಿದ್ದ ಮತ್ತೋರ್ವ ಪುತ್ರ ಕೂಡ ಕೊರೊನಾಗೆ ಬಲಿಯಾಗಿದ್ದಾರೆ‌.‌ ಇಬ್ಬರು ಮಕ್ಕಳಿಗೂ ತಲಾ ಓರ್ವ ಪುತ್ರ, ಪುತ್ರಿ ಇದ್ದಾರೆಂದು ತಿಳಿದು ಬಂದಿದೆ. ಸದ್ಯ ಕುಟುಂಬಸ್ಥರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ.

ಸರ್ಕಾರಿ ಅಧಿಕಾರಿ ಸಾವು : ಇನ್ನು, ಇಂದು ಚಾಮರಾಜನಗರದ ಕ್ರೀಡಾ ಇಲಾಖೆ ನಿರ್ದೇಶಕ ಚೆಲುವಯ್ಯ ಕೋವಿಡ್​ಗೆ ಬಲಿಯಾಗಿದ್ದು, ಕಳೆದ ಹಲವು ದಿನಗಳಿಂದ ಸೋಂಕಿತರಾಗಿ ಚಿಕಿತ್ಸೆ ಪಡೆಯುತ್ತಿದ್ದರು.‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.