ಚಾಮರಾಜನಗರ : ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ದ್ವಿಗುಣಗೊಳ್ಳುತ್ತಿದೆ. ಇಂದು ಹೊಸದಾಗಿ 534 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 2968ಕ್ಕೆ ಏರಿಕೆಯಾಗಿದೆ.
ಇಂದಿನ ಹೊಸ ಪ್ರಕರಣಗಳಲ್ಲಿ ಯಳಂದೂರು ತಹಶೀಲ್ದಾರ್, ಗುಂಡ್ಲುಪೇಟೆ ಹಾಗೂ ಚಾಮರಾಜನಗರ ತಹಶೀಲ್ದಾರ್ ಅವರಿಗೆ ಕೊರೊನಾ ವಕ್ಕರಿಸಿದೆ. ಒಟ್ಟಾರೆ 128 ಮಕ್ಕಳಲ್ಲೂ ಸೋಂಕು ಪತ್ತೆಯಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲೇ ಸೋಂಕು ಹೆಚ್ಚು ಬಾಧಿಸುತ್ತಿದೆ. ಸೋಂಕಿತರ ಸಂಖ್ಯೆಯಲ್ಲೂ ಗ್ರಾಮಾಂತರದವರ ಪಾಲೇ ಹೆಚ್ಚಿದೆ.
ಇಂದು 144 ಮಂದಿ ವೈರಸ್ನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 2255 ಮಂದಿ ಹೋಂ ಐಸೋಲೇಷನ್ನಲ್ಲಿದ್ದಾರೆ. ಓರ್ವ ಸೋಂಕಿತ ಐಸಿಯುನಲ್ಲಿ ದಾಖಲಾಗಿದ್ದಾರೆ. 7403 ಮಂದಿ ಪ್ರಾಥಮಿಕ, ದ್ವಿತೀಯ ಸಂಪರ್ಕಿತರ ಮೇಲೆ ನಿಗಾ ಇರಿಸಿದ್ದು, 1 ಸಾವಿರಕ್ಕೂ ಅಧಿಕ ಮಂದಿಗೆ ಕೋವಿಡ್ ಟೆಸ್ಟ್ ನಡೆಸಲಾಗಿದೆ.
ಸೋಂಕಿಗೆ ವೃದ್ಧ ಸಾವು : ಮೂರನೇ ಅಲೆಯಲ್ಲಿ ಕೊರೊನಾ ಸೋಂಕಿಗೆ ನಾಲ್ಕನೇ ವ್ಯಕ್ತಿಯೊಬ್ಬರು ಇಂದು ಬಲಿಯಾಗಿದ್ದಾರೆ. ಕೊಳ್ಳೇಗಾಲದ 74 ವರ್ಷದ ವೃದ್ಧರೊಬ್ಬರು ಕಳೆದ 22ರಂದು ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ. ಈವರೆಗೆ ವೈರಸ್ಗೆ 525 ಮಂದಿ ಬಲಿಯಾಗಿದ್ದಾರೆ.
ಓದಿ: ಐಎಎಸ್ ನಿಯಮಗಳನ್ನು ತಿರುಚುವ ಪ್ರಸ್ತಾಪ ವಿರೋಧಿಸಿ ಪ್ರಧಾನಿಗೆ ಪತ್ರ ಬರೆದ ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್..