ETV Bharat / state

ಚಾಮರಾಜನಗರ: ಒಂದೇ ಕುಟುಂಬದ ನಾಲ್ವರು ಸೇರಿ ಗರ್ಭಿಣಿಗೂ ತಗುಲಿದ ಕೊರೊನಾ! - pregnant woman

ಚಾಮರಾಜನಗರದಲ್ಲಿ ದಿನೇ ದಿನೆ ಕೊರೊನಾ ಮಹಾಮಾರಿಯ ಹಾವಳಿ ಹೆಚ್ಚಾಗುತ್ತಿದ್ದು, ಇದೀಗ ಸೋಂಕಿತರ ಸಂಖ್ಯೆ 132ಕ್ಕೆ ಏರಿಕೆಯಾಗಿದೆ.

corona cases increased in chamarajanagara
ಚಾಮರಾಜನಗರದಲ್ಲಿ ಮುಂದುವರೆದ ಕೊರೊನಾ ಹಾವಳಿ
author img

By

Published : Jul 9, 2020, 8:36 PM IST

ಚಾಮರಾಜನಗರ: ಜಿಲ್ಲೆಯಲ್ಲಿ ಇಂದು 12 ಕೊರೊನಾ ಕೇಸ್ ಪತ್ತೆಯಾಗುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 132ಕ್ಕೆ ಏರಿಕೆಯಾಗಿದೆ. 101 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊಳ್ಳೇಗಾಲ ಮಂಜುನಾಥನಗರ ನಿವಾಸಿಯಾದ ಪಿ-18560ನಿಂದ ಇಡೀ ಕುಟುಂಬಕ್ಕೆ ಇಂದು ಸೋಂಕು ತಗುಲಿದ್ದು, ಇವರಲ್ಲಿ 14 ವರ್ಷದ ಬಾಲಕನೂ ಇದ್ದಾನೆ. ಅಲ್ಲದೇ ಜಿಲ್ಲೆಯ ರೆಹಮತ್ ನಗರದಲ್ಲಿ ತುಂಬು ಗರ್ಭಿಣಿಗೂ ಕೋವಿಡ್ ಸೋಂಕು ದೃಢಪಡುವ ಮೂಲಕ ಜಿಲ್ಲೆಯಲ್ಲಿ ಒಟ್ಟು ಮೂವರು ಗರ್ಭಿಣಿಯರಿಗೆ ಸೋಂಕು ತಗುಲಿದಂತಾಗಿದೆ.

ಯಳಂದೂರಿನ ಸಾಮಾಜಿಕ ಕಾರ್ಯಕರ್ತ ಕೆಲ ದಿನಗಳ ಹಿಂದೆ ಸೋಂಕು ತಗುಲಿಸಿಕೊಂಡಿದ್ದರು. ಇಂದು ಅವರ ಪತ್ನಿ ಹಾಗೂ ಮಗುವಿಗೂ ಕೊರೊನಾ ವೈರಸ್​​ ದೃಢಪಟ್ಟಿದೆ. ಇಂದಿನ 12 ಪ್ರಕರಣಗಳಲ್ಲಿ ಕೊಳ್ಳೇಗಾಲ ಹಾಗೂ ಯಳಂದೂರಿನಲ್ಲಿ ತಲಾ 4, ಚಾಮರಾಜನಗರದಲ್ಲಿ 1, ಗುಂಡ್ಲುಪೇಟೆಯಲ್ಲಿ 3 ಪ್ರಕರಣ ಪತ್ತೆಯಾಗಿದೆ.

ಐಸಿಯುನಲ್ಲಿ 4 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಜಿಲ್ಲೆಯ ಕಂಟೈನ್​ಮೆಂಟ್​​ ವಲಯಗಳ ಸಂಖ್ಯೆ 73ಕ್ಕೆ ಏರಿಕೆಯಾಗಿದೆ. 1032 ಮಂದಿಯ ಕೋವಿಡ್ ವರದಿ ಬರಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.