ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರ ಕೊರೊನಾ ಸೋಂಕು ಮುಕ್ತವಾಗುತ್ತಿದೆ ಎಂಬ ಆಶಾಭಾವನೆ ಕಮರುತ್ತಿದ್ದು, ದಿಢೀರನೇ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರುಗತಿ ಕಂಡಿದೆ.
ಬುಧವಾರ ಏಕಾಏಕಿ 10 ಹೊಸ ಕೋವಿಡ್ ಕೇಸ್ ಪತ್ತೆಯಾಗುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 26ಕ್ಕೆ ಏರಿಕೆಯಾಗಿದ್ದು ಕಳವಳ ಮೂಡಿಸಿದೆ. ಒಂದು ವಾರದ ಹಿಂದೆಯಷ್ಟೇ ಸಕ್ರಿಯ ಪ್ರಕರಣಗಳ ಸಂಖ್ಯೆ 5 ಇದ್ದದ್ದು, ಈಗ 26ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ: ಕೇರಳ, ಮಹಾರಾಷ್ಟದಿಂದ ಬರುವ ಚಾಲಕರಿಗೆ ಆರ್ಟಿಪಿಸಿಆರ್ ಪರೀಕ್ಷೆ ಕಡ್ಡಾಯ.!
ಚಾಮರಾಜನಗರ ಕೇರಳ ಗಡಿಯನ್ನು ಹಂಚಿಕೊಂಡಿದ್ದು ಮತ್ತೊಂದು ತಲೆಬಿಸಿಯಾಗಿದೆ. ಕೊರೊನಾ ಏರಿಕೆಯಾಗುತ್ತಿದ್ದರೂ ಮಾಸ್ಕ್ ಜಾಗೃತಿ ಒಂದೇ ದಿನಕ್ಕೆ ಸೀಮಿತವಾಗಿ ಜನರು ಮತ್ತದೇ ಅಸಡ್ಡೆ ತೋರುತ್ತಿರುವುದೇ ಕೊರೊನಾ ಸೋಂಕು ಹೆಚ್ಚಳಕ್ಕೆ ಕಾರಣ ಎನ್ನಲಾಗುತ್ತಿದೆ.