ಚಾಮರಾಜನಗರ: ಗಡಿ ನಾಡಿನಲ್ಲಿಯೂ ಕೊರೊನಾ ಹೆಮ್ಮಾರಿಯ ಭೀತಿ ಆವರಿಸಿದೆ. ಜಾತ್ರೆ, ಸಮಾರಂಭ ಹಾಗೂ ಸಾಮೂಹಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸುವಂತೆ ಗ್ರಾಮಾಂತರ ಠಾಣೆ ಪೊಲೀಸರು ಅರಿವು ಮೂಡಿಸುತ್ತಿದ್ದಾರೆ.
ಗ್ರಾಮಾಂತರ ಠಾಣೆ ವ್ಯಾಪ್ತಿಯ ಸುಮಾರು 99 ಗ್ರಾಮಗಳಲ್ಲಿ ಆಟೋ, ಟಾಂಟಾಂ ಬಳಸಿ ಮಾಹಿತಿ ನೀಡಲಾಗುತ್ತಿದೆ. ಪಿಎಸ್ಐ ಲೋಹಿತ್‌ಕುಮಾರ್ ನೇತೃತ್ವದಲ್ಲಿ ಎಲ್ಲಾ ಬೀಟ್ ಪೊಲೀಸರು ಮನೆ ಮನೆಗೆ ತೆರಳಿ ಸ್ವಚ್ಛತೆ ಕುರಿತು ಮಾಹಿತಿ ನೀಡುತ್ತಿದ್ದಾರೆ. ಇನ್ನೂ ಈ ಆತಂಕವನ್ನು ಹೆಚ್ಚಿಸುವ ಸುಳ್ಳು ಸುದ್ದಿ ಬಗ್ಗೆಯೂ ಜಾಗರೂಕರಾಗಿರುವಂತೆ ಎಚ್ಚರಿಸಿದರು.
ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಸ್ಕ್: ಪ್ರವಾಸಿಗರೊಂದಿಗೆ ಸಂಪರ್ಕದಲ್ಲಿರುವ ಬಿಳಿಗಿರಿರಂಗನ ಬೆಟ್ಟ ಮತ್ತು ಕೆ.ಗುಡಿ ಅರಣ್ಯ ಇಲಾಖೆ ಸಿಬ್ಬಂದಿಗೆ ಸುರಕ್ಷಿತ ಮುಖಗವಸನ್ನು ಡಿಸಿಎಫ್ ಸಂತೋಷ್ ವಿತರಿಸಿದ್ದಾರೆ. ಕೊರೊನಾ ವೈರಸ್ನ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.