ಚಾಮರಾಜನಗರ: ಈರುಳ್ಳಿ ತುಂಬಿಕೊಂಡು ತೆರಳುತ್ತಿದ್ದ ಪಿಕಪ್ ಹಾಗೂ ಹಾಲಿನ ಟ್ಯಾಂಕರ್ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಸ್ಥಳದಲ್ಲೇ ಅಸುನೀಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕೂತನೂರು ಸಮೀಪ ನಡೆದಿದೆ. ಕೇರಳದ ಕಲ್ಪೆಟ್ಟ ಮೂಲದ ಅಲ್ತಾಫ್ ಹಾಗೂ ಅಜ್ಮಲ್ ಮೃತರು. ಗುಂಡ್ಲುಪೇಟೆಯಲ್ಲಿ ಈರುಳ್ಳಿ ಖರೀದಿಸಿ ಕೇರಳಕ್ಕೆ ಹೋಗುತ್ತಿರುವಾಗ ದುರ್ಘಟನೆ ಸಂಭವಿಸಿದೆ.
![pickup and the milk tanker collision](https://etvbharatimages.akamaized.net/etvbharat/prod-images/15096406_thu.jpg)
ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಶೀಲ ಶಂಕಿಸಿ ಪತ್ನಿ ಕೊಲೆಗೈದ ಪತಿ: ಆರೋಪಿ ಪೊಲೀಸ್ ವಶಕ್ಕೆ