ಚಾಮರಾಜನಗರ: ದೇಶ ಲಾಕ್ಡೌನ್ ಗಿರುವುದರಿಂದ ಸೂರು-ಊಟವಿಲ್ಲದೇ ಪರದಾಡುತ್ತಿದ್ದ ನಿರಾಶ್ರಿತರಿಗೆ ಮಾದಪ್ಪನ ಸನ್ನಿಧಿಯೇ ನೆಲೆಯಾಗಿದೆ.
ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರಾಶ್ರಿತರ ಕೇಂದ್ರ ತೆರೆಯಲಾಗಿದ್ದು, 25 ಮಂದಿ ಈಗಾಗಲೇ ಆಶ್ರಯ ಪಡೆದುಕೊಂಡಿದ್ದಾರೆ. ಅವರಿಗೆ ಹೊಸ ಬಟ್ಟೆ, ಕಲ್ಯಾಣ ಮಂಟಪದಲ್ಲಿ ವಸತಿ ಸೌಕರ್ಯ ಕಲ್ಪಿಸಲಾಗಿದೆ.
ನಿರಾಶ್ರಿತ ಮಹಿಳೆಯರಿಗೆ ಉಚಿತ ಸೀರೆ, ಪುರುಷರಿಗೆ ಪಂಚೆ, ಬಟ್ಟೆಗಳನ್ನ ನೀಡುತ್ತಿದ್ದು, ಅಗತ್ಯ ವೈದ್ಯಕೀಯ ಸೌಲಭ್ಯವನ್ನು ಪ್ರಾಧಿಕಾರ ಮಾಡಿರುವುದಾಗಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ ತಿಳಿಸಿದ್ದಾರೆ.