ETV Bharat / state

ರಾಷ್ಟ್ರಪತಿ ಪ್ರವಾಸ: ಸಿಎಂ ಚಾಮರಾಜನಗರಕ್ಕೆ ಬರ್ತಾರೆ- ಸಚಿವ ಎಸ್.ಟಿ.ಸೋಮಶೇಖರ್ - Chamarajanagar recent news

ದಸರಾ ಉದ್ಘಾಟನಾ ಕಾರ್ಯಕ್ರಮದ ಬಳಿಕ ರಾಮನಾಥ್ ಕೋವಿಂದ್ ಅವರೊಟ್ಟಿಗಿನ ಭೋಜನ ಕೂಟದಲ್ಲಿ ಸಿಎಂ ಭಾಗಿಯಾಗಿ, ಮೆಡಿಕಲ್ ಕಾಲೇಜಿನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುತ್ತಾರೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

CM will be visiting Chamarajanagar : ST Somashekar
ಸಿಎಂ ಚಾಮರಾಜನಗರಕ್ಕೆ ಬರ್ತಾರೆ ಎಂದ ಸಚಿವ ಎಸ್.ಟಿ.ಸೋಮಶೇಖರ್
author img

By

Published : Sep 30, 2021, 9:18 PM IST

ಚಾಮರಾಜನಗರ: ಇದೇ ಅಕ್ಟೋಬರ್ 7 ರಂದು ಚಾಮರಾಜನಗರ ಪ್ರವಾಸ ಕೈಗೊಂಡಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪಾಲ್ಗೊಳ್ಳುತ್ತಾರೆಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಬಿಳಿಗಿರಿರಂಗನ ಬೆಟ್ಟದಲ್ಲಿನ ಹೆಲಿಪ್ಯಾಡ್ ಸ್ಥಳ ಪರಿಶೀಲಿಸಿದ ನಂತರ ಮಾತನಾಡಿ, ದಸರಾ ಉದ್ಘಾಟನಾ ಕಾರ್ಯಕ್ರಮದ ಬಳಿಕ ರಾಮನಾಥ್ ಕೋವಿಂದ್ ಅವರೊಟ್ಟಿಗಿನ ಭೋಜನ ಕೂಟದಲ್ಲಿ ಸಿಎಂ ಭಾಗಿಯಾಗಿ, ಮೆಡಿಕಲ್ ಕಾಲೇಜಿನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುತ್ತಾರೆ. ಅದಕ್ಕೂ ಮುನ್ನ ನಾನು ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆ ನಡೆಸಿ ಸಿಎಂ ಅವರ ಗಮನಕ್ಕೆ ತರಬೇಕಾದ ವಿಚಾರಗಳನ್ನು ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.

ರಾಷ್ಟ್ರಪತಿಗಳ ಪ್ರವಾಸಕ್ಕಾಗಿ ಮೂರು ಹೆಲಿಪ್ಯಾಡ್‌ಗಳನ್ನು ನಿರ್ಮಿಸಲು ಈಗಾಗಲೇ ಅಧಿಕಾರಿಗಳು ಕ್ರಮ ಕೈಗೊಂಡಿದ್ದು, ಯಾವುದೇ ಲೋಪವಾಗದಂತೆ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರ್ವಹಿಸಲಾಗುವುದು ಎಂದರು.

ಸಿಎಂ ಚಾಮರಾಜನಗರಕ್ಕೆ ಬರ್ತಾರೆ ಎಂದ ಸಚಿವ ಎಸ್.ಟಿ.ಸೋಮಶೇಖರ್

ದಸರಾಗೆ 500 ಮಂದಿ:

ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಿಗೂ 500 ಮಂದಿಗೆ ಅವಕಾಶ ಕೊಡಬೇಕೆಂದು ಕೇಳಿದ್ದೆವು. ಇಂದು ಆರೋಗ್ಯ ಸಚಿವರು ಅದರ ಬಗ್ಗೆ ಹೇಳಿಕೆ ನೀಡಿದ್ದಾರೆ ಎಂದು ಪ್ರಶ್ನೆಯೆಂದಕ್ಕೆ ಉತ್ತರಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.