ETV Bharat / state

ಪ್ರತಿಮೆ ಮೂಲಕ ಮಾದಪ್ಪನ ಹಿರಿಮೆ-ಗರಿಮೆ ಹೆಚ್ಚಳ: ಸಿಎಂ ಬೊಮ್ಮಾಯಿ - Lord Mahadeshwar

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಧಾರ್ಮಿಕ ಸ್ಥಳವಾದ ಮಲೆಮಹದೇಶ್ವರ ಬೆಟ್ಟದಲ್ಲಿಂದು ಸಿಎಂ ಬೊಮ್ಮಾಯಿ ಅವರು 108 ಅಡಿಯ ಮಲೆ ಮಹದೇಶ್ವರನ ಪ್ರತಿಮೆ ಅನಾವರಣಗೊಳಿಸಿದರು.

cm-bommai-unveiled-the-108-feet-statue-of-lord-mahadeshwar
ಪ್ರತಿಮೆ ಮೂಲಕ ಮಾದಪ್ಪನ ಹಿರಿಮೆ-ಗರಿಮೆ ಹೆಚ್ಚಳ: ಸಿಎಂ ಬೊಮ್ಮಾಯಿ
author img

By

Published : Mar 18, 2023, 7:11 PM IST

ಪ್ರತಿಮೆ ಮೂಲಕ ಮಾದಪ್ಪನ ಹಿರಿಮೆ-ಗರಿಮೆ ಹೆಚ್ಚಳ: ಸಿಎಂ ಬೊಮ್ಮಾಯಿ

ಚಾಮರಾಜನಗರ: 108 ಅಡಿ ಪ್ರತಿಮೆ ಮೂಲಕ ಮಲೆಮಹದೇಶ್ವರ ಬೆಟ್ಟ ಹಾಗೂ ಮಲೆಮಹದೇಶ್ವರನ ಹಿರಿಮೆ-ಗರಿಮೆ ಹೆಚ್ಚಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ 108 ಅಡಿಯ ಮಲೆ ಮಹದೇಶ್ವರನ ಪ್ರತಿಮೆ ಲೋಕಾರ್ಪಣೆಗೊಳಿಸಿದರು.

ನಂತರ ಮಾತನಾಡಿ ಅವರು, ‘‘ಬೆಟ್ಟದಲ್ಲಿನ ಯಾವುದೇ ಮೂಲೆಯಲ್ಲಿ ನಿಂತು ನೋಡಿದರು ಮಹದೇಶ್ವರನ ದರ್ಶನ ಆಗಲಿದೆ. ಪ್ರತಿಮೆಯಲ್ಲಿ ಜೀವಕಳೆ ಇದ್ದು ತಿಂಗಳಲ್ಲಿ ಎರಡನೇ ಬಾರಿ ಮಹದೇಶ್ವರನ ದರ್ಶನ ಸೌಭಾಗ್ಯ ಸಿಕ್ಕಿದೆ. ಕರ್ನಾಟಕದ ಜನರ ಬದುಕು ಬಂಗಾರವಾಗಲಿ, ಬಡವರ ಬದುಕು ಹಸನಾಗಲಿ ಎಂದು ದೇವರಲ್ಲಿ ಕೇಳಿಕೊಂಡಿದ್ದೇನೆ ಎಂದು ಹೇಳಿದರು.

ಶ್ರೀಕ್ಷೇತ್ರದ ಅಭಿವೃದ್ಧಿಗೆ ಪ್ರಾಧಿಕಾರ ರಚನೆ ಆಗಿದ್ದು ಭಕ್ತರಿಗೆ ಸಮರ್ಪಕ ಸೌಕರ್ಯ ಒದಗಿಸಲಾಗುತ್ತಿದೆ, ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗಾಗಿ ಸರ್ಕಾರ ಕ್ರಮ ಕೈಗೊಂಡಿದ್ದು ಕೆಲವೇ ದಿನಗಳಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡುತ್ತೇನೆ ಎಂದು ಹೇಳಿದರು‌. ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಸೋಮಣ್ಣ, ಸಹಕಾರ ಸಚಿಚ ಸೋಮಶೇಖರ್, ಸುತ್ತೂರು ಶ್ರೀ ಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಗಹನ ಚರ್ಚೆಯಲ್ಲಿ ಮುಳಗಿದ್ದ ಸೋಮಣ್ಣ-ಬೊಮ್ಮಾಯಿ: ಭಿನ್ನಮತ ಶಮನಗೊಂಡಿರುವ ಹಿನ್ನೆಲೆಯಲ್ಲಿ ಸಚಿವ ಸೋಮಣ್ಣ ಕಾರ್ಯಕ್ರಮದ ಆರಂಭದಿಂದಲೂ ಸಿಎಂ ಬೊಮ್ಮಾಯಿ ಜೊತೆ ನಿರಂತರ ಪಿಸು ಆಡುತ್ತಿದ್ದದ್ದು ಕಂಡು ಬಂದಿತು. ವೇದಿಕೆಯಲ್ಲಿ ಕುಳಿತು ಇಬ್ವರು ಗಹನವಾದ ಚರ್ಚೆಯಲ್ಲಿ ಮುಳುಗಿದ್ದರು.

ಸೋಮಣ್ಣ ಕುಟುಂಬದೊಟ್ಟಿಗೆ ಸಿಎಂ ಫೋಟೋ: ಕಾರ್ಯಕ್ರಮದಲ್ಲಿ ಸಚಿವ ಸೋಮಣ್ಣ ಪತ್ನಿ ಹಾಗೂ ಕುಟುಂಬಸ್ಥರು ಭಾಗಿಯಾಗಿದ್ದರು‌. ಕಾರ್ಯಕ್ರಮ ಮುಗಿದ ಬಳಿಕ ಸಿಎಂ ಅವರೊಟ್ಟಿಗೆ ಸೋಮಣ್ಣ ಕುಟುಂಬ ಫೋಟೊ ಕ್ಲಿಕ್ಕಿಸಿಕೊಂಡರು. ಬೊಮ್ಮಾಯಿ ಹಸನ್ಮುಖಿಯಾಗಿ ಫೋಟೋಗೆ ಫೋಸ್ ಕೊಟ್ಟರು.

ಲೇಔಟ್ ಕೃಷ್ಣಪ್ಪ ಹಾಗೂ ಪ್ರಿಯಕೃಷ್ಣ ವಿರುದ್ಧ ಸಚಿವ ಸೋಮಣ್ಣ ಕಿಡಿ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಕ್ಷೇತ್ರದ ಜನರು 4 ವರ್ಷ 10 ತಿಂಗಳು ನೆಮ್ಮದಿಯಿಂದ ಇದ್ದರು. ಈಗ ಅಪ್ಪ-ಮಕ್ಕಳು ತರ್ಲೆಗಳು ರೌಡಿಸಂ ಮಾಡಿಸೋದು ಅವರ ಕೆಲಸ, ನಾನು ಹೋಗಿ ನೋಡ್ತೀನಿ, ಯಾರಿಗೆ ಹೇಳಬೇಕು ಅವರಿಗೆ ಹೇಳ್ತೀನಿ. ಬೆಂಗಳೂರಿನ ಜನರು ಸೂಕ್ಷ್ಕ ಜನರು, ಸರಿಯಾದ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು‌.

ಚಾಮರಾಜನಗರದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಪಕ್ಷದ ತೀರ್ಮಾನಕ್ಕೆ ಬದ್ಧ, ಇಂಥ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲು ಎಂದು ಸೂಚಿಸಿದರೇ ನಿಲ್ಲುತ್ತೇನೆ, ನಿನಗೆ 72 ಆಯ್ತು ಬೇಡ ಎಂದರೆ ನಿಲ್ಲಲ್ಲ, ಚಾಮರಾಜನಗರಕ್ಕೂ ನನಗೂ 50 ವರ್ಷದ ಸಂಬಂಧವಿದೆ ಎಲ್ಲವೂ ಪಕ್ಷಕ್ಕೆ ಬಿಟ್ಟದ್ದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿ.ಎಸ್. ಯಡಿಯೂರಪ್ಪ ಗೈರಾದ ಪ್ರಶ್ನೆ ಬಗ್ಗೆ ಗರಂ ಆದ ಸೋಮಣ್ಣ, ಸಿಎಂ ಬಂದಿದ್ದು ತೃಪ್ತಿ ಆಗಲಿಲ್ಲವಾ..!?, ಮಹೇಶ್ ಬಂದಿದ್ದು, ಸೋಮಣ್ಣ ಬಂದಿದ್ದು ಸಮಾಧಾನ ಆಗಲಿಲ್ಲವಾ?? ಬರುವುದು ಬಿಡುವುದು ಸಮಯದ ತೊಡಕಿನಿಂದ, ಅದಕ್ಕೆ ಉಪ್ಪುಕಾರ ನೀವು ಹಾಕಬೇಡಿ ಎಂದರು‌. ಇದೇ ವೇಳೆ, ನಾನು ಯಾರನ್ನು ಹೊಗಳುವುದು ಇಲ್ಲಾ- ತೆಗಳುವುದು ಇಲ್ಲಾ ಎಂದು ಮಾರ್ಮಿಕವಾಗಿ ನುಡಿದರು.

ಇದನ್ನೂ ಓದಿ: ಚಾಮರಾಜನಗರನಕ್ಕೆ ಇನ್ನೆರಡು ದಿನದಲ್ಲಿ ವಿಶೇಷ ಪ್ಯಾಕೇಜ್​: ಸಿಎಂ ಬೊಮ್ಮಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.