ETV Bharat / state

'ಇದು ಅನ್ನ ತಿನ್ನುವವರ ಹೋರಾಟ, ಮೋದಿಯೆಂಬ ಭ್ರಮೆ ಕಳಚಿದೆ' - Chukki Nanjundaswamy Latest News

ಕೇಂದ್ರ ಸರ್ಕಾರದ ಮೂರು ಕಾನೂನುಗಳು ರೈತರಿಗೆ ಮಾತ್ರ ಸೀಮಿತವಲ್ಲ. ಅದು 3 ಹೊತ್ತು ಅನ್ನ ತಿನ್ನುವವರು ಪ್ರಶ್ನಿಸಬೇಕಾದ ಕಾನೂನುಗಳು. ಹೀಗಾಗಿ ನಾವು ಅದನ್ನು ಪ್ರಶ್ನಿಸಬೇಕಾಗಿದೆ ಎಂದು ರೈತ ಮುಖಂಡೆ ಚುಕ್ಕಿ ನಂಜುಂಡಸ್ವಾಮಿ ಹೇಳಿದರು.

ರೈತ ಮುಖಂಡೆ ಚುಕ್ಕಿ ನಂಜುಂಡಸ್ವಾಮಿ
ರೈತ ಮುಖಂಡೆ ಚುಕ್ಕಿ ನಂಜುಂಡಸ್ವಾಮಿ
author img

By

Published : Dec 8, 2020, 4:49 PM IST

ಚಾಮರಾಜನಗರ: ಇಂದು ನಡೆಯುತ್ತಿರುವ ಹೋರಾಟ ಕೇವಲ ರೈತರ ಹೋರಾಟವಲ್ಲ, ರೈತರಿಗೆ ಸಂಬಂಧಿಸಿದ ಹೋರಾಟವಲ್ಲ. ಇದು ಅನ್ನ ತಿನ್ನುವವರ ಹೋರಾಟ ಎಂದು ರೈತ ಮುಖಂಡೆ ಚುಕ್ಕಿ ನಂಜುಂಡಸ್ವಾಮಿ ಹೇಳಿದರು.

ನಗರದಲ್ಲಿ ವಿವಿಧ ಸಂಘಟನೆಗಳು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಅವರು ಭಾಗಿಯಾಗಿ ಮಾತನಾಡಿ, ಪ್ರಗತಿಪರರು, ನಗರವಾಸಿಗಳು, ವಿವಿಧ ಸಂಘಟನೆಗಳ ಹೋರಾಟಗಾರರು ಇಂದು ಸ್ಪಂದಿಸುತ್ತಿರುವ ರೀತಿ ನೋಡಿದರೇ ನರೇಂದ್ರ ಮೋದಿ ಎಂಬ ಭ್ರಮೆ ಕಳಚಿ ಬಿದ್ದಿದೆ‌‌ ಎಂದರು.

ಕಳೆದ 14 ದಿನಗಳಿಂದ ನಡೆಯುತ್ತಿರುವ ಹೋರಾಟ ಪಂಜಾಬ್ ಮತ್ತು ಕೇಂದ್ರ ಸರ್ಕಾರದ್ದಾಗಿದೆ. ದಕ್ಷಿಣ ಭಾರತದ ರೈತ ಸಂಘಟನೆಗಳು ಅವರ ಪ್ರತಿಭಟನೆಯಲ್ಲಿ ಭಾಗಿಯಾಗಲು ಕೊರೊನಾದಿಂದ ರೈಲುಗಳು ಸಿಕ್ಕಿಲ್ಲ. ಹರಿಯಾಣ ಮತ್ತು ಪಂಜಾಬ್ ದೆಹಲಿಗೆ ಸಮೀಪವಿರುವುದರಿಂದ ಪಂಜಾಬ್ ಹೋರಾಟದ ನೇತೃತ್ವ ವಹಿಸಿದೆ. ಈ ಮೂರು ಕಾನೂನುಗಳು ಕೇವಲ ರೈತರಿಗೆ ಸಂಬಂಧಿಸಿದ್ದಲ್ಲ. 3 ಹೊತ್ತು ಅನ್ನ ತಿನ್ನುವವರು ಪ್ರಶ್ನಿಸಬೇಕಾದ ಕಾನೂನುಗಳು. ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟ ನೋಡಿದರೇ ಮತ್ತೊಂದು ಸ್ವಾತಂತ್ರ್ಯ ಚಳವಳಿ ಆರಂಭವಾಗಿದೆ. ಇದು ಇಡೀ ದೇಶ ವ್ಯಾಪಿಸಬೇಕು ಎಂದು ಅವರು ಕರೆಕೊಟ್ಟರು.

ಬಿಜೆಪಿ ಧೋರಣೆ ನೋಡಿದರೆ ರೈತ ವಿರೋಧಿ ಕಾನೂನುಗಳನ್ನು ವಾಪಾಸ್ ತೆಗೆದುಕೊಳ್ಳುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ರೈತರ ಹಿತ ಕಾಯಲು ಇಷ್ಟು ಸುತ್ತಿನ ಸಭೆಗಳು ಬೇಕಾಗಿತ್ತೇ? ಬಹುಸಂಖ್ಯಾತರು ವಿರೋಧಿಸುತ್ತಿರುವಾಗ ಇಷ್ಟು ಸುತ್ತಿನ ಮಾತುಕತೆ ಅವಶ್ಯಕತೆ ಇರಲಿಲ್ಲ. ಈಗ ನಮ್ಮನ್ನು ನಾವು ಎಚ್ಚರಿಸಿಕೊಳ್ಳಬೇಕು. ನಮ್ಮೊಳಗಿರುವ ಬಿಜೆಪಿ ಬೆಂಬಲವನ್ನು ಇಲ್ಲವಾಗಿಸಬೇಕು. ನಮ್ಮ ಹೋರಾಟ ಮುಂದಿನ ತಲೆಮಾರಿಗಾಗಿ ಎಂದು ಎಲ್ಲರಿಗೂ ಅರ್ಥೈಸಬೇಕು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.