ಚಾಮರಾಜನಗರ: ಪ್ರಸವ ವೇದನೆಯಿಂದ ಹೆರಿಗೆ ವೇಳೆ ಮಗುವೊಂದು ಮೃತಪಟ್ಟಿರುವ ಘಟನೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಕೊಂಬುಡಿಕ್ಕಿಯಲ್ಲಿ ನಡೆದಿದೆ.
ಗ್ರಾಮದ ಗಿರಿಜನ ಮಹಿಳೆ ಪುಟ್ಟಿ (26) ಎಂಬುವವರು ಪ್ರಸವದ ವೇಳೆ ತನ್ನ ಮಗುವನ್ನು ಕಳೆದುಕೊಂಡ ನತದೃಷ್ಟೆ. ಮಹದೇಶ್ವರ ಬೆಟ್ಚ ಪಂಚಾಯ್ತಿ ವ್ಯಾಪ್ತಿಗೆ ಈ ಗ್ರಾಮ ಒಳಪಡಲಿದ್ದು ,ಯಾವುದೇ ಕಾರಣಕ್ಕೂ ಮನೆಯಲ್ಲಿ ಹೆರಿಗೆ ಆಗಬಾರದು ಎಂಬ ಉದ್ದೇಶದಿಂದ ಸರ್ಕಾರದಿಂದ ಹಲವು ಯೋಜನೆಗಳಿದ್ದರೂ ಈ ಗ್ರಾಮಕ್ಕೆ ಅಂಗನವಾಡಿ ಕಾರ್ಯ ಕರ್ತೆ ಮತ್ತು ಆಶಾ ಕಾರ್ಯಕರ್ತೆಯರು ಇಲ್ಲದಿದ್ದರಿಂದ ಈ ಅವಗಡ ಆಗಿದೆ.
ಅಷ್ಟೇ ಅಲ್ಲದೇ ಈ ಹಿಂದೆ ಪುಟ್ಟಿಗೆ ಮಾತ್ರೆ ಹಾಗೂ ಇಂಜಕ್ಷನ್ ನೀಡಿ ಸೂಕ್ತ ಚಿಕಿತ್ಸೆ ನೀಡಲಾಗಿತ್ತು. ಇದು ಆಕೆಗೆ ನಾಲ್ಕನೆ ಮಗು.ಈಗಾಗಲೇ 2ಗಂಡು ಹಾಗೂ 1ಹೆಣ್ಣು ಮಗು ಚೆನ್ನಾಗಿದೆ. ಆಕೆ ಆಗಿಂದಾಗ್ಗೆ ತಪಾಸಣೆ ವಿಚಾರದಲ್ಲಿ ನಿಲ೯ಕ್ಷ್ಯ ವಹಿಸಿದ್ದ ಹಿನ್ನೆಲೆ ನಾಲ್ಕನೆ ಮಗು ಹೊಟ್ಟೆಯಲ್ಲೆ ಸಾವಿಗೀಡಾಗಿದೆ. ಬಾಣಂತಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದ್ದು ಆಕೆಗೆ ಯಾವುದೆ ಪ್ರಾಣಾಪಾಯವಿಲ್ಲ ಎಂದಿದ್ದಾರೆ.