ETV Bharat / state

ಪಿಗ್ಮಿ ಹೆಸರಲ್ಲಿ ಲಕ್ಷಾಂತರ ಹಣ ಪಂಗನಾಮ: ಕೊಳ್ಳೇಗಾಲದಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಜನ - ಕೊಳ್ಳೇಗಾಲ ಜೀವನ ಉದಯಕಾಲ ಸಂಸ್ಥೆ ವಂಚನೆ

ಕೊಳ್ಳೇಗಾಲದ ವೀರಭದ್ರ ಕಾಂಪ್ಲೆಕ್ಸ್​ನಲ್ಲಿ ಜೀವನ ಉದಯಕಾಲ ಸಂಸ್ಥೆ ಎಂಬ ಹೆಸರಿನಲ್ಲಿ ನಡೆಸಲಾಗುತ್ತಿದ್ದ ಖಾಸಗಿ ಫೈನಾನ್ಸ್ ಸಂಸ್ಥೆಯೊಂದು ಜನರಿಗೆ ಲಕ್ಷಾಂತರ ರೂ. ಹಣ ವಂಚಿಸಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

financial firm
ಲಕ್ಷಾಂತರ ರೂ. ಹಣ ವಂಚಿಸಿದ ಖಾಸಗಿ ಫೈನಾನ್ಸ್ ಸಂಸ್ಥೆ
author img

By

Published : Dec 1, 2021, 7:19 AM IST

ಕೊಳ್ಳೇಗಾಲ: ನಗರದ ಖಾಸಗಿ ಫೈನಾನ್ಸ್ ಸಂಸ್ಥೆಯೊಂದು ಜನರಿಂದ ಲಕ್ಷಾಂತರ ರೂ. ಪಿಗ್ಮಿ ಹಣ ಕಟ್ಟಿಸಿಕೊಂಡು ವಂಚಿಸಿರುವ ಆರೋಪ ಕೇಳಿಬಂದಿದೆ.

ಕೊಳ್ಳೇಗಾಲದ ವೀರಭದ್ರ ಕಾಂಪ್ಲೆಕ್ಸ್​ನಲ್ಲಿ ಜೀವನ ಉದಯಕಾಲ ಸಂಸ್ಥೆ ಎಂಬ ಹೆಸರಿನಲ್ಲಿ ನಡೆಸಲಾಗುತ್ತಿದ್ದ ಖಾಸಗಿ ಫೈನಾನ್ಸ್ ಸಂಸ್ಥೆ ಜನರಿಗೆ ಲಕ್ಷಾಂತರ ರೂ. ಹಣ ವಂಚಿಸಿದೆ ಎಂದು ವಂಚನೆಗೊಳಗಾದವರು ಆರೋಪಿಸಿದ್ದಾರೆ.

ಈ ಫೈನಾನ್ಸ್ ಸಂಸ್ಥೆ ಪ್ರತಿ ದಿನ ಪಿಗ್ಮಿದಾರರ ಬಳಿ ಹಣ ಕಟ್ಟಿಸಿಕೊಳ್ಳುತ್ತಿತ್ತು. ಕೆಲ ವರ್ಷಗಳಿಂದ ಜನರು ಹಣ ಕಟ್ಟಿ, ಬಳಿಕ ಪಡೆದು ವ್ಯವಹರಿಸುತ್ತಿದ್ದರು. ಆದರೆ ಕಳೆದ ನ. 24 ರಿಂದ ಜೀವನ ಉದಯಕಾಲ ಫೈನಾನ್ಸ್ ಸಂಸ್ಥೆ ಮುಚ್ಚಿದ್ದು, ಗಾಬರಿಗೊಂಡ ಜನರು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಈ ಫೈನಾನ್ಸ್ ಸಂಸ್ಥೆಯ ಜೊತೆ ವ್ಯವಹಾರ ಮಾಡಿದ್ದು, ಸಾರ್ವಜನಿಕರಿಗೆ ಸೇರಿದ ಲಕ್ಷಗಟ್ಟಲೆ ಪಿಗ್ಮಿ ಹಣ ವಂಚನೆಯಾಗಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: OmicronVariant: ಪುಣೆ, ನಾಗ್ಪುರ್​ದಲ್ಲಿ ಶಾಲೆ ಪುನಾರಂಭ ದಿನಾಂಕ ಮುಂದೂಡಿಕೆ

ಈಟಿವಿ ಭಾರತದೊಂದಿಗೆ ಮಾತನಾಡಿದ ವಂಚನೆಗೊಳಾಗದ ವ್ಯಕ್ತಿ ಬಾಸ್ಕರ್, 'ಹಲವು ತಿಂಗಳಿನಿಂದ ಜೀವನ ಉದಯಕಾಲ ಫೈನಾನ್ಸ್ ಸಂಸ್ಥೆಯಲ್ಲಿ ವ್ಯವಹರಿಸುತ್ತಿದ್ದೇನೆ. ಆದರೆ ಕೆಲ ದಿನಗಳಿಂದ ಸಂಸ್ಥೆ ಮುಚ್ಚಲಾಗಿದೆ. ಹಣ ಕಟ್ಟಿಸಿಕೊಳ್ಳಲು ಸಿಬ್ಬಂದಿ ಬರುತ್ತಿಲ್ಲ. ಇಲ್ಲಿಯವರೆಗೂ ಕಟ್ಟಿರುವ ಹಣವನ್ನು ಕೇಳಲು ಹೋದ್ರೆ ಸಂಬಂಧಪಟ್ಟ ಸಂಸ್ಥೆಯ ವ್ಯವಸ್ಥಾಪಕರು ಜಾರಿಕೊಳ್ಳುತ್ತಿದ್ದಾರೆ. ಹಾಗಾಗಿ, ನಮಗೆ ನ್ಯಾಯ ಕೊಡಿಸಿ,ಹಣ ವಾಪಸ್​ ಕೊಡಿಸುವಂತೆ ಪಟ್ಟಣ ಪೊಲೀಸರಿಗೆ ದೂರು ನೀಡಿದ್ದೇನೆ' ಎಂದರು.

ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ವಿ. ಚೇತನ್ ಎಂಬವರು ಪ್ರಕರಣ ದಾಖಲಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.