ETV Bharat / state

ವ್ಯಕ್ತಿಗೆ ಪಂಗನಾಮ ಹಾಕಿದ ಖದೀಮರು: 4 ನಿಮಿಷದಲ್ಲಿ 1.80 ಲಕ್ಷ ರೂ ಖೋತಾ - fraud in chamarajanagara

ಆ್ಯಪ್​ ಅಪ್​ಡೇಟ್​ ಮಾಡುವಂತೆ ಮೆಸೇಜ್​ ಕಳುಹಿಸಿದ ಬಳಿಕ ವ್ಯಕ್ತಿಯಿಂದ ಒಟಿಪಿ ಪಡೆದು ಲಕ್ಷಾಂತರ ರೂಪಾಯಿ ವಂಚಿಸಿರುವ ಪ್ರಕರಣ ಚಾಮರಾಜನಗರದಲ್ಲಿ ನಡೆದಿದೆ.

ವ್ಯಕ್ತಿಗೆ ಪಂಗನಾಮ ಹಾಕಿದ ಖದೀಮರು
ವ್ಯಕ್ತಿಗೆ ಪಂಗನಾಮ ಹಾಕಿದ ಖದೀಮರು
author img

By

Published : Nov 6, 2022, 2:03 PM IST

ಚಾಮರಾಜನಗರ: ನಿಮ್ಮ ಬ್ಯಾಂಕ್ ಖಾತೆ ರದ್ದಾಗಲಿದೆ, ಆ್ಯಪ್ ಅಪ್​​ಡೇಟ್ ಮಾಡಿ ಎಂದು ಬಂದ ಮೆಸೇಜ್​ ಅನ್ನು​ ವ್ಯಕ್ತಿಯೊಬ್ಬರು​​​ ಕ್ಲಿಕ್ ಮಾಡಿದ್ದಾರೆ. ಬಳಿಕ ಅವರ ಖಾತೆಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣ ಮಾಯವಾಗಿದೆ. ಈ ಘಟನೆ ಹನೂರು ತಾಲೂಕಿನ ಗೋಪಿಶೆಟ್ಟಿಯೂರು ಗ್ರಾಮದಲ್ಲಿ ನಡೆದಿದೆ.

ಮೊಬೈಲ್​ಗೆ ಬಂದ ಮೆಸೇಜ್​ನ ಲಿಂಕ್ ಒತ್ತಿದ್ದೇ ತಡ ಒಟಿಪಿ ಕೇಳಿದೆ. ಬ್ಯಾಂಕಿನವರೆಂದು ಕರೆ ಮಾಡಿದ ವ್ಯಕ್ತಿಗೆ ಒಟಿಪಿ ಕೊಟ್ಟಿದ್ದಾರೆ.‌‌ ಕೇವಲ 4 ನಿಮಿಷದ ಅವಧಿಯಲ್ಲಿ 24 ಸಾವಿರ, 50 ಸಾವಿರ, 99 ಸಾವಿರ, 10 ಸಾವಿರ ಹೀಗೆ ಬ್ಯಾಂಕ್ ಖಾತೆಯಲ್ಲಿದ್ದ ಹಣ ಕಡಿತಗೊಂಡಿದೆ. ಒಟ್ಟಾರೆ 1.83 ಸಾವಿರ ರೂಪಾಯಿ ವ್ಯಕ್ತಿ ಖಾತೆಯಿಂದ ಬೇರೆಯವರ ಅಕೌಂಟ್​ಗೆ ವರ್ಗಾವಣೆಗೊಂಡಿದೆ. ಹಣ ಕಳೆದುಕೊಂಡವರು ಚಾಮರಾಜನಗರ ಸಿಇಎನ್ ಠಾಣೆಗೆ ದೂರು ಕೊಟ್ಟಿದ್ದಾರೆ.

ಇದನ್ನೂ ಓದಿ: ಹೆಲಿಕಾಪ್ಟರ್ ಸೇವೆ ಬಗ್ಗೆ ಗೂಗಲ್​​ನಲ್ಲಿ ಸರ್ಚ್: 38,060 ರೂ.ಕಳೆದುಕೊಂಡ ಟೆಕ್ಕಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.