ETV Bharat / state

ದಂಡದ ಬದಲು ಹೆಲ್ಮೆಟ್​​​​... ಚಾಮರಾಜನಗರ ಪೊಲೀಸರ ಮಾಸ್ಟರ್​​​ ಪ್ಲಾನ್​​​​! - chamrajnagar police has diceded to give helmet instead of fine

ಹೆಲ್ಮೆಟ್​ ಹಾಕದೆ ವಾಹನ ಚಾಲನೆ ಮಾಡುವ ಪ್ರಕರಣಗಳನ್ನು ತಹಬದಿಗೆ ತರುವ ಉದ್ದೇಶದಿಂದ ಚಾಮರಾಜನಗರ ಪೊಲೀಸರು ದಂಡದ ಬದಲಿಗೆ ಸವಾರರಿಗೆ ಹೆಲ್ಮೆಟ್​​ ನೀಡುವ ಹೊಸ ಪ್ಲಾನ್​ ರೂಪಿಸಿದ್ದಾರೆ.

police
ದಂಡದ ಹಣದ ಬದಲು ಹೆಲ್ಮೆಟ್
author img

By

Published : Dec 10, 2019, 3:04 PM IST

ಚಾಮರಾಜನಗರ: ದಂಡ ಹೆಚ್ಚಾದರೂ ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡುವವರು ತಹಬದಿಗೆ ಬರದ ಹಿನ್ನೆಲೆ ದಂಡದ ಹಣಕ್ಕೆ ಬದಲು ಸ್ಥಳದಲ್ಲೇ ಹೆಲ್ಮೆಟ್ ನೀಡಲು ಚಾಮರಾಜನಗರ ಪೊಲೀಸರು ನಿರ್ಧರಿಸಿದ್ದಾರೆ.

ಸುಮಾರು1500 ರೂ. ಬೆಲೆಬಾಳುವ ISI ಮಾರ್ಕಿನ ಹೆಲ್ಮೆಟ್​​​ಗಳನ್ನು ರಿಯಾಯಿತಿ ದರದಲ್ಲಿ 750 ರೂ.ಗೆ ಸವಾರರಿಗೆ ನೀಡುವ ಕಾರ್ಯಕ್ಕೆ ಇಂದು ಜಿಲ್ಲಾ ಎಸ್ಪಿ ಹೆಚ್.ಡಿ.ಆನಂದಕುಮಾರ್ ಚಾಲನೆ ನೀಡಿದ್ದಾರೆ.

ದಂಡದ ಹಣದ ಬದಲು ಹೆಲ್ಮೆಟ್

2017 ಮತ್ತು 2018ರಲ್ಲಿ 162 ಮಂದಿ ಹೆಲ್ಮೆಟ್ ಧರಿಸದೇ ಅಪಘಾತದಲ್ಲಿ ಮೃತಪಟ್ಟಿದ್ದು, ಈ ವರ್ಷ 142 ಮಂದಿ ಮೃತಪಟ್ಟಿದ್ದಾರೆ‌. 2019ರಲ್ಲಿ ಇಲ್ಲಿಯವರೆಗೆ 1.69 ಕೋಟಿ ರೂ. ದಂಡದ ಹಣ ಸಂಗ್ರಹಿಸಿದ್ದರೂ ಗ್ರಾಮೀಣ ಭಾಗದಲ್ಲಿ, ಕೊಳ್ಳೇಗಾಲ ಹಾಗೂ ಗುಂಡ್ಲುಪೇಟೆಯಲ್ಲಿ ಇಂದಿಗೂ ಕಡ್ಡಾಯ ಹೆಲ್ಮೆಟ್ ನಿಯಮ ಪಾಲನೆಯಾಗದಿರುವುದರಿಂದ ರೋಸಿ ಹೋಗಿರುವ ಪೊಲೀಸರು ದಂಡ ಹಾಕುವುದರೊಂದಿಗೆ ರಿಯಾಯಿತಿ ದರದಲ್ಲಿ ಹೆಲ್ಮೆಟ್ ನೀಡಲು ಮುಂದಾಗಿದ್ದಾರೆ.

ಪೊಲೀಸ್ ಕ್ಯಾಂಟೀನ್​​​ನಲ್ಲಿ ಪ್ರಾರಂಭದಲ್ಲಿ 500 ಹೆಲ್ಮೆಟ್​​ಗಳನ್ನು ತರಿಸಿದ್ದು, ಈ ಯೋಜನೆ ಫಲಪ್ರದವಾದರೆ ಇದನ್ನು ಇಲಾಖೆ ಮುಂದುವರೆಸಲಿದೆ. ದಂಡದ ಹಣದ ಬದಲಿಗೆ ಹೆಲ್ಮೆಟ್ ನೀಡುವ ಯೋಜನೆ ಚಾಮರಾಜನಗರ, ಕೊಳ್ಳೇಗಾಲ ಹಾಗೂ ಗುಂಡ್ಲುಪೇಟೆಯಲ್ಲಿ ಪ್ರಾರಂಭಿಕವಾಗಿ ಇಂದಿನಿಂದ ಹೆಲ್ಮೆಟ್​​​ ನೀಡಲಾಗುತ್ತಿದೆ.

Intro:ದಂಡದ ಹಣಕ್ಕೆ ಸವಾರರಿಗೆ ಹೆಲ್ಮೆಟ್... ಚಾಮರಾಜನಗರ ಪೊಲೀಸರ ಮಾಸ್ಟರ್ ಪ್ಲಾನ್!

ಚಾಮರಾಜನಗರ: ದಂಡ ಹೆಚ್ಚಾದರೂ ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡುವವರ ಪ್ರಕರಣ ತಹಬದಿಗೆ ಬರದ ಹಿನ್ನೆಲೆಯಲ್ಲಿ ದಂಡದ ಹಣಕ್ಕೆ ಸ್ಥಳದಲ್ಲೇ ಹೆಲ್ಮೆಟ್ ನೀಡಲು ಚಾಮರಾಜನಗರ ಪೊಲೀಸರು ನಿರ್ಧರಿಸಿದ್ದಾರೆ.

Body:1500 ರೂ. ಬೆಲೆಬಾಳುವ ಹೆಲ್ಮೆಟ್ ಗಳನ್ನು ರಿಯಾಯಿತಿ ದರದಲ್ಲಿ 750 ರೂ.ಗೆ ISI ಮಾರ್ಕಿನ ಹೆಲ್ಮೆಟ್ ಗಳನ್ನು ಸವಾರರಿಗೆ ನೀಡಲು ಇಂದು ಜಿಲ್ಲಾ ಎಸ್ಪಿ ಎಚ್.ಡಿ.ಆನಂದಕುಮಾರ್ ಚಾಲನೆ ನೀಡಿದ್ದಾರೆ.

2017 ಮತ್ತು 2018 ರಲ್ಲಿ 162 ಮಂದಿ ಹೆಲ್ಮೆಟ್ ಧರಿಸದೇ ಅಪಘಾತದಲ್ಲಿ ಮೃತಪಟ್ಟಿದ್ದು ಈ ವರ್ಷ 142 ಮಂದಿ ಮೃತಪಟ್ಟಿದ್ದಾರೆ‌. 2019ರ ಇಲ್ಲಿಯವರೆಗೆ 1.69 ಕೋಟಿ ರೂ. ದಂಡದ ಹಣ ಸಂಗ್ರಹಿಸಿದ್ದರೂ ಗ್ರಾಮೀಣ ಭಾಗದಲ್ಲಿ, ಕೊಳ್ಳೇಗಾಲ ಹಾಗೂ ಗುಂಡ್ಲುಪೇಟೆಯಲ್ಲಿ ಇಂದಿಗೂ ಕಡ್ಡಾಯ ಹೆಲ್ಮೆಟ್ ಧಾರಣೆ ನಿಯಮ ಇನ್ನೂ ಪಾಲನೆಯಾಗದಿರುವುದರಿಂದ ರೋಸಿ ಹೋಗಿರುವ ಪೊಲೀಸರು ದಂಡ ಹಾಕುವುದರೊಂದಿಗೆ ರಿಯಾಯಿತಿ ದರದಲ್ಲಿ ಹೆಲ್ಮೆಟ್ ನೀಡಲು ಮುಂದಾಗಿದ್ದಾರೆ.

ಪೊಲೀಸ್ ಕ್ಯಾಂಟಿನ್ ನಲ್ಲಿ ಪ್ರಾರಂಭದಲ್ಲಿ 500 ಹೆಲ್ಮೆಟ್ ಗಳನ್ನು ತರಿಸಿದ್ದು ಈ ಯೋಜನೆ ಫಲಪ್ರದವಾದರೇ ಇದನ್ನು ಇಲಾಖೆ ಮುಂದುವರೆಸಲಿದ್ದು ದಂಡದ ಹಣದ ಬದಲಿಗೆ ಹೆಲ್ಮೆಟ್ ನೀಡುವ ಯೋಜನೆ ಚಾಮರಾಜನಗರ, ಕೊಳ್ಳೇಗಾಲ ಹಾಗೂ ಗುಂಡ್ಲುಪೇಟೆಯಲ್ಲಿ ಪ್ರಾರಂಭಿಕವಾಗಿ ಇಂದಿನಿಂದ ನೀಡಲಾಗುತ್ತದೆ.

Conclusion:ಒಟ್ಟಿನಲ್ಲಿ ದಂಡದ ಹಣದ ಮೊತ್ತಕ್ಕಿಂತ ಜೀವ ಅಮೂಲ್ಯವಾದದ್ದರಿಂದ ಪೊಲೀಸರ ಈ ಪ್ಲಾನ್ ಎಷ್ಟರ ಮಟ್ಟಿಗೆ ವರ್ಕೌಟ್ ಆಗಲಿದೆ ಎಂದು ಕಾದು ನೋಡಬೇಕಿದೆ.

Bite: ಎಚ್.ಡಿ.ಆನಂದಕುಮಾರ್, ಪೊಲೀಸ್ ವರಿಷ್ಠಾಧಿಕಾರಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.